ಪುನರ್ವಸತಿ ಕೇಂದ್ರಕ್ಕೆ ಮಾನಸಿಕ ಅಸ್ವಸ್ಥರು, ಭಿಕ್ಷುಕರ ಸ್ಥಳಾಂತರ

09Kush01
ಕುಶಾಲನಗರದಲ್ಲಿ ಇದ್ದ ಮಾನಸಿಕ ಅಸ್ವಸ್ಥರು ಮತ್ತು ಭಿಕ್ಷುಕರನ್ನು ಖಾಸಗಿ ಬಸ್ ನಿಲ್ದಾಣದಲ್ಲಿ ಸ್ನಾನ ಮಾಡಿಸಿ ಆಂಬುಲೆನ್ಸ್ ಗೆ ಹತ್ತಿಸಲು ಸಿದ್ಧರಾಗಿರುವುದು.
Published on

ಕುಶಾಲನಗರ: ಸೋಮವಾರಪೇಟೆಯ ಸಮಾಜ ಸೇವಕ ಫ್ರಾನ್ಸಿಸ್ ಡಿಸೋಜಾ ಅವರ ಸಹಕಾರದೊಂದಿಗೆ ಕುಶಾಲನಗರ ಪುರಸಭೆ ಪಟ್ಟಣದಲ್ಲಿದ್ದ 10ಕ್ಕೂ ಹೆಚ್ಚು ಮಂದಿ ಮಾನಸಿಕ ಅಸ್ವಸ್ಥರನ್ನು ಬೆಂಗಳೂರಿನ ಆಟೋರಾಜ ಸಂಸ್ಥೆಯ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಸೆ.17ರಂದು ಮಾನಸಿಕ ಅಸ್ವಸ್ಥರ ಬಗ್ಗೆ ವಿಜಯವಾಣಿ ವಿಶೇಷ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಆರೋಗ್ಯ ನಿರೀಕ್ಷಿಕ ಉದಯ್ ನೇತೃತ್ವದಲ್ಲಿ ಈ ಕಾರ್ಯ ಮಾಡಲಾಗಿದೆ. ಪೌರಕಾರ್ಮಿಕರು ಮಾನಸಿಕ ಅಸ್ವಸ್ಥರಿಗೆ ಕುಶಾಲನಗರ ಬಸ್ ನಿಲ್ದಾಣದಲ್ಲಿರುವ ಶೌಚಗೃಹದಲ್ಲಿ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿ, ಉಪಾಹಾರ ನೀಡಿ ಅಂಬುಲೆನ್ಸ್ ಮೂಲಕ ಬೆಂಗಳೂರಿಗೆ ಕಳುಹಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net