ಶ್ರೀಶಾ ಸೌಹಾರ್ದ ಸೊಸೈಟಿಯ ಆಡಳಿತ ಕಚೇರಿ ಸ್ಥಳಾಂತರ

mng_20 feb shreesha
ಸ್ಥಳಾಂತರಗೊಂಡ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಆಡಳಿತ ಕಚೇರಿಯನ್ನು ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಚಿತ್ರಾಪುರ ಮಠದ ಪೀಠಾಧಿಪತಿ ಶ್ರೀ ವಿಧ್ಯೇಂದ್ರ ತೀರ್ಥ ಶ್ರೀಪಾದರು ಉದ್ಘಾಟಿಸಿದರು.
Published on

ಮಂಗಳೂರು: ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಆಡಳಿತ ಕಚೇರಿಯನ್ನು ಈಗಿರುವ ಉರ್ವ ಸ್ಟೋರ್ ಶಾಖೆಯಿಂದ ಬೇರ್ಪಡಿಸಿ ಹಂಪನಕಟ್ಟೆ ಪಿ.ಎಂ.ರಾವ್ ರಸ್ತೆ ಶಾಖೆಗೆ ಸುಗಮ ಆಡಳಿತಕ್ಕಾಗಿ ಹಾಗೂ ಸದಸ್ಯರ ಅನುಕೂಲಕ್ಕಾಗಿ ಗುರುವಾರ ವಿಧ್ಯುಕ್ತವಾಗಿ ಸ್ಥಳಾಂತರಿಸಲಾಯಿತು.

ಸ್ಥಳಾಂತರಗೊಂಡ ಆಡಳಿತ ಕಚೇರಿಯನ್ನು ಉದ್ಘಾಟಿಸಿದ ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಚಿತ್ರಾಪುರ ಮಠದ ಪೀಠಾಧಿಪತಿ ಶ್ರೀ ವಿಧ್ಯೇಂದ್ರ ತೀರ್ಥ ಶ್ರೀಪಾದ ಮಾತನಾಡಿ, ಶ್ರೀಶಾ ಸೌಹಾರ್ದ ಸೊಸೈಟಿಯ ಸಮಾಜಮುಖಿ ಕಾರ್ಯಗಳನ್ನು ನಾವು ಹತ್ತಿರದಿಂದ ಗಮನಿಸುತ್ತಿದ್ದೇವೆ. ಮುಖ್ಯವಾಗಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ನೀಡಿ ಆಯೋಜಿಸುತ್ತಿರುವ ಕಾರ್ಯಗಳು ಹೆಮ್ಮೆ ತಂದಿವೆ. ದೇವಸ್ಥಾನ ಅಥವಾ ಇನ್ಯಾವುದೇ ಪೂಜಾ ಸ್ಥಳಗಳಿಗೆ ಹೋಗಿಯೇ ದೇವರ ಸೇವೆ ಮಾಡಬೇಕೆಂದಿಲ್ಲ. ಸರ್ವರಲ್ಲೂ ದೇವರನ್ನು ಕಂಡು ಅವರ ಸೇವೆ ಮಾಡಿದರೆ ಅದೂ ಶ್ರೇಷ್ಠ ದೇವರ ಸೇವೆ. ಜನತಾ ಸೇವೆಯೇ ಜನಾರ್ಧನ ಸೇವೆ ಎಂಬ ದಿಕ್ಕಿನಲ್ಲಿ ಸಾಗುತ್ತಿರುವ ಶ್ರೀಶಾ ಸೊಸೈಟಿಯು ಉತ್ತರೋತ್ತರ ಅಭಿವೃದ್ಧಿ ಹೊಂದುತ್ತಾ ಸಮಾಜದ ಸೇವೆ ನಿರಂತರ ಮಾಡುವಂತಾಗಲಿ ಎಂದರು.

ಶ್ರೀಶಾ ಸೊಸೈಟಿಯ ಅಧ್ಯಕ್ಷ ಎಂ.ಎಸ್.ಗುರುರಾಜ್, ಉಪಾಧ್ಯಕ್ಷ ಉದಯ ವಿ ಶಾಸ್ತ್ರಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಿತ್ರಾ ಡಿಸೋಜಾ, ನಿರ್ದೇಶಕ ಮಂಡಳಿಯ ಸದಸ್ಯರು, ಸೊಸೈಟಿಯ ಶಾಖೆಗಳ ಪ್ರಬಂಧಕರು, ಸಿಬ್ಬಂದಿ ವರ್ಗ ಹಾಗೂ ಸದಸ್ಯರು ಉಪಸ್ಥಿತರಿದ್ದರು. ವಿದ್ಯಾ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಉರ್ವ ಸ್ಟೋರ್ಸ್ ಶಾಖೆಯು ಈಗಿರುವ ಸ್ಥಳದಲ್ಲಿಯೇ ಮುಂದುವರೆಯುವುದು ಎಂದು ಶ್ರೀಶಾ ಸೌಹಾರ್ದ ಸೊಸೈಟಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net