

ಕಲಬುರಗಿ: ನಗರದ ಶೆಟ್ಟಿ ಇನ್ಸ್ಟಿಟ್ಯೂಟ್ ಆ್ ಟೆಕ್ನಾಲಜಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಬಿಂದು ಪ್ರತಿಷ್ಠಿತ ಹೈಟೆಕ್ ಇಂಡಸ್ಟ್ರೀಸ್ನಲ್ಲಿ ಜ್ಯೂನಿಯರ್ ಟೆಕ್ನೀಶಿಯನ್ ಹುದ್ದೆ ಪಡೆದಿದ್ದಾರೆ.
ಕಾಲೇಜಿನಲ್ಲಿ ನೀಡಿದ ಅತ್ಯುತ್ತಮ ಬೋಧನಾ ಕ್ರಮ, ತಂತ್ರಜ್ಞಾನ ಆಧಾರಿತ, ಪ್ರಾಯೋಗಿಕ ಶಿಕ್ಷಣವೂ ವಿದ್ಯಾರ್ಥಿನಿ ಉದ್ಯೋಗ ಪಡೆಯಲು ಪೂರಕವಾಗಿದೆ. ಅಲ್ಲದೇ ಶೆಟ್ಟಿ ಕಾಲೇಜು ಬಜಾಜ್ ಇಂಜಿನಿಯರಿಂಗ್ ಸ್ಕಿಲ್ಸ್ ಟ್ರೇನಿಂಗ್ ಸಂಸ್ಥೆಯೊಂದಿಗೆ ಮಾಡಿಕೊಂಡ ಒಪ್ಪಂದಂತೆ ಶಿಶುಕ್ಷು ತರಬೇತುದಾರರಾಗಿ ಆಯ್ಕೆಯಾಗಿದ್ದರು. ಆರು ತಿಂಗಳ ತರಬೇತಿಯಲ್ಲಿ ಅತ್ಯುತ್ತಮ ಜ್ಞಾನ ಪಡೆದು, ಕೌಶಲ ಪ್ರದರ್ಶನ ತೋರಿದ್ದಕ್ಕೆ ಹೈಟೆಕ್ ಇಂಡಸ್ಟ್ರೀಸ್ ಸಂಸ್ಥೆಯೂ ಜ್ಯೂನಿಯರ್ ಟೆಕ್ನಿಶಿಯನ್ ಹುದ್ದೆಗೆ ಆಯ್ಕೆ ಮಾಡಿದೆ.
ಶೆಟ್ಟಿ ಇನ್ಸ್ಟಿಟ್ಯೂಟ್ ಆ್ ಟೆಕ್ನಾಲಜಿ ಕಾಲೇಜಿನಲ್ಲಿ ನಾಲ್ಕು ವರ್ಷದ ಅತ್ಯುತ್ತಮ ಶಿಕ್ಷಣ, ಬೆಸ್ಟ್ ಒಪ್ಪಂದದಿಂದ ನನಗೆ ಕೌಶಲ, ವಿಶ್ವಾಸ ಮೂಡಿಸಿದ್ದರಿಂದ ಉದ್ಯೋಗದ ಅವಕಾಶ ದೊರಕಿದೆ ಎಂದು ವಿದ್ಯಾರ್ಥಿನಿ ಬಿಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿನಿಯ ಸಾಧನೆಗೆ ಶೆಟ್ಟಿ ಸಂಸ್ಥೆಯ ಅಧ್ಯಕ್ಷ ಉದಯಶಂಕರ ಶೆಟ್ಟಿ ಸೇರಿ ಸಂಸ್ಥೆ ನಿರ್ದೇಶಕರು, ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು, ಬೋಧಕ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿ, ಅಭಿನಂದನೆ ತಿಳಿಸಿದ್ದಾರೆ.