

ಹುಬ್ಬಳ್ಳಿ: ನಗರದ ಬಸವೇಶ್ವರ ಪಾರ್ಕ್ ನಲ್ಲಿ ಗುರುಪೂರ್ಣಿಮೆ ನಿಮಿತ್ತ ಎಸ್.ಎಸ್. ಶೆಟ್ಟರ್ ಫೌಂಡೇಷನ್ ವತಿಯಿಂದ ವನಮಹೋತ್ಸವವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಸ್.ಎಸ್. ಶೆಟ್ಟರ್ ಫೌಂಡೇಷನ್ ಅಧ್ಯಕ್ಷ ಸಂಕಲ್ಪ ಶೆಟ್ಟರ್, ಫೌಂಡೇಷನ್ ವತಿಯಿಂದ ಸಾವಿರಾರು ಗಿಡಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡುವ ಜವಾಬ್ದಾರಿ ತೆಗೆದುಕೊಂಡಿದ್ದೇವೆ. ಪ್ರಕೃತಿಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.
ಹುಡಾ ಮಾಜಿ ಅಧ್ಯಕ್ಷ ನಾಗೇಶ್ ಕಲಬುರ್ಗಿ,ವಿಜಯ್ ಗುಡ್ಡದ, ಪ್ರಕಾಶ್ ಶೆಟ್ಟಿ, ಮಹಾವೀರ್ ಮಣಿಕಟ್ಟಿ, ಫೌಂಡೇಷನ್ ಸದಸ್ಯರಾದ ಅಭಿ ಮುಪರ್ಲ, ವೀರೇಶ್ ಗೋಂದಿ, ಕಿಶನ್ ಬಿಲಾನ, ಸಮೀರ್ ಕಾಟಾಪುರ್, ಜಾವೀದ್ ಖಾನ್, ಮಂಜುನಾಥ್ ಬ್ಯಾಡಗಿ, ಶಿವಪ್ಪ ನಾಗೋಜಿ, ಭಾರತಿ ಟಪಾಲ್, ಜಯಶ್ರೀ ನಿಂಬರಗಿ, ನಿವಾಸಿಗಳು ಉಪಸ್ಥಿತರಿದ್ದರು.