ಮೃತರಿಗೆ ಕಂಬನಿ ಮಿಡಿದ ಶೆಟ್ಟರ್

1681890544-2838.jpg
Published on

ಬೆಳಗಾವಿ: ಪ್ರಯಾಗರಾಜದ ಮಹಾ ಕುಂಭ ಮೇಳದಲ್ಲಿ ಪಾಲ್ಗೊಂಡು ತದನಂತರ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನವನ್ನು ಮುಗಿಸಿ, ಗೋಕಾಕ ನಗರಕ್ಕೆ ಮರಳಿ ಸಂಚಾರ ಕೈಕೊಂಡು ಸಾಗುತ್ತಿರುವಾಗ ಇಂದು ನಸುಕಿನ ಜಾವದಲ್ಲಿ ಮಧ್ಯಪ್ರದೇಶದ ಜಬಲಪೂರ ಜಿಲ್ಲೆಯ ಶಿವಪೂರೆ ಪೋಲಿಸ್ ಠಾಣೆಯ ವ್ಯಾಪ್ತಿಯ ಶಿವೊರಿ ಹತ್ತಿರ ಸಂಭವಿಸದ ಭೀಕರ ವಾಹನ ಅಪಘಾತದಲ್ಲಿ ಗೋಕಾಕ ನಗರ ಆರು ಜನ ಭಕ್ತಾಧಿಗಳು ಸಾವನಪ್ಪಿದ್ದು ತುಂಬಾ ದುಃಖದ ಸಂಗತಿಯಾಗಿದೆ ಎಂದು ಬೆಳಗಾವಿ ಲೋಕಸಭಾ ಸದಸ್ಯ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಕಂಬನಿ ಮಿಡಿದಿದ್ದಾರೆ.

ಮೃತರ ಆತ್ಮ ಶಾಂತಿಗಾಗಿ ಪ್ರಾರ್ಥಿಸುತ್ತಾ ಮತ್ತು ಅವರ ಕುಟುಂಬಕ್ಕೆ ಈ ನೋವನ್ನು ಸಹಿಸಿಕೊಳ್ಳುವ ಎಲ್ಲ ಶಕ್ತಿಯನ್ನು ದಯಪಾಲಿಸಲೆಂದು ಎಂದು ಪ್ರಾರ್ಥಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net