ಶೆಟ್ಟರ್ ಪ್ರಚಾರದಿಂದಲೇ ಗೆಲುವು ಸಿಕ್ಕಿದೆ ಎಂದ ಆಸಿಫ್ ಶೇಠ್

IMG_20230514_174543.webp
Published on

ಬೆಳಗಾವಿ : ಈ ಬಾರಿ ನಮ್ಮ ಪರವಾಗಿ ಹಿರಿಯರಾದ ಜಗದೀಶ ಶೆಟ್ಟರ್ ಪ್ರಚಾರ ಮಾಡಿದ್ದರ ಪರಿಣಾಮವಾಗಿ ನಾನು ಗೆಲುವು ಸಾಧಿಸಲು ಸಾಧ್ಯವಾಗಿದೆ. ಹುಬ್ಬಳ್ಳಿಯಲ್ಲಿ ಅವರೂ, ಗೆಲ್ಲಬೇಕಿತ್ತು. ಶೆಟ್ಟರ್ ಸೋಲು ಬೇಸರ ತಂದಿದೆ. ಅವರೊಂದಿಗೆ ಕಾಂಗ್ರೆಸ್ ಸದಾ ಜೊತೆಗಿರುತ್ತದೆ ಎಂದು ಕಾಂಗ್ರೆಸ್ ವಿಜೇತ ಅಭ್ಯರ್ಥಿ ಆಸೀಪ್ ಸೇಠ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೆಲುವಿನ ಸಂಭ್ರಮಾಚರನೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ ವಿಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯ ಕೆಲವರು ಇಂತಹ ಕೆಲಸ ಮಾಡುತ್ತಿದ್ದಾರೆ.ಆ ವಿಡಿಯೋ ನಕಲಿ. ಕಳೆದ ಚುನಾವಣೆ ಸಂದರ್ಭದಲ್ಲೂ ಸಹ ಇದನ್ನೆ ಮಾಡಿದ್ದರು. ಈ ಕುರಿತು ಮಾನನಷ್ಟ ಮೊಕದ್ದಮೆ ಹೂಡಲು ಸಿದ್ಧತೆ ನಡೆಸಿದ್ದು, ಬೆಳಗಾವಿ ನಗರ ಪೊಲೀಸ್ ಆಯುಕ್ತನ್ನು ಭೇಟಿಯಾಗಿ ಚರ್ಚಿಸುವೆ ಎಂದರು.
ಇನ್ನೂ ಕಾಂಗ್ರೆಸ್ ಸಿದ್ದರಾಮಯ್ಯ, ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ ಸುರ್ಜೇವಾಲಾ ಪ್ರಯತ್ನದಿಂದ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ ಗೆದ್ದಿದೆ. ಈ  ಅಭೂತಪೂರ್ವ ಗೆಲುವಿನಿಂದ ಕರ್ನಾಟಕಕ್ಕೆ ಈಗ ಅಚ್ಛೆದಿನ್ ಬಂದಿದೆ. ಗೆದ್ದವರಲ್ಲಿ ಮಂತ್ರಿ ಯಾರಾಗುತ್ತಾರೆ ಎನ್ನುವುದನ್ನು ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net