

ಹುಬ್ಬಳ್ಳಿ: ಇಲ್ಲಿಯ ಮಹಿಳಾ ಸಾಧಕಿ, ಸಾಮಾಜಿಕ ಕಾರ್ಯಕರ್ತೆ ವಿದ್ಯಾ ಹುಬ್ಳಿಕರ್ ಅವರಿಗೆ ಶಿರೋ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಇವರು ಯೋಗ ಹಾಗೂ ನೃತ್ಯ ವಿಭಾಗದಲ್ಲಿ ಮಾಡಿರುವ ಅದ್ವೀತಿಯ ಸಾಧನೆ ಪರಿಗಣಿಸಿ ಸ್ಪಾಟ್ಲೈಟ್ ವಿಭಾಗದಲ್ಲಿ ಅವಾರ್ಡ್ಗೆ ಆಯ್ಕೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಐಎಚ್ಆರ್ಎ ಮಹಿಳಾ ಟಕದ ಅಧ್ಯೆ ರಾಧಾ ಕೊಳ್ಳಿ ಅವರು ವಿದ್ಯಾ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಿದರು. ಚಿತ್ರನಟಿ ಲಕ್ಷಿ$್ಮ, ವಿಜ್ಞಾನಿ ಟಿ.ಎನ್. ಸುರೇಶ, ಪೊಲೀಸ್ ಅಧಿಕಾರಿ ವಿಜಯಕುಮಾರ ಇದ್ದರು.
ಮಹಿಳಾ ಸಬಲೀಕರಣಕ್ಕಾಗಿ ಅನೇಕ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡಿರುವ ಇವರು ಇನ್ನರ್ವ್ಹೀಲ್ ಕ್ಲಬ್, ಭಗಿನಿ ಮಹಿಳಾ ಮಂಡಳ ಸೇರಿ ಹಲವು ಸಂಸ್ಥೆಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದಾರೆ. ಗೃಹಿಣಿಯಾಗಿ ಇವರು ಮಾಡಿರುವ ಸಾಧನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಗೃಹಿಣಿಯಾಗಿಯೂ ಜೀವನದಲ್ಲಿ ಏನಾದರೂ ಸಾಧನೆ ಮಾಡಬಹುದು. ಇದಕ್ಕೆ ಆಸಕ್ತಿ ಇರಬೇಕು. ಯೋಗ ಕಲಿಸುವುದು, ನೃತ್ಯದ ಕೋರಿಯೋಗ್ರಾಫಿ ಮುಂತಾದ ಕೆಲಸಗಳನ್ನು ಮಾಡುತ್ತಿರುವೆ. ಪ್ರಶಸ್ತಿಯಿಂದ ಇನ್ನಷ್ಟು ಹುಮ್ಮಸ್ಸು ಬಂದಿದೆ ಎಂದು ವಿದ್ಯಾ ಹುಬ್ಳಿಕರ್ ತಿಳಿಸಿದ್ದಾರೆ.