ಮೊಳಕಾಲ್ಮೂರು ಬಳಿ ನೀರಿನಲ್ಲಿ ಮುಳುಗಿ ಇಬ್ಬರ ಸಾವು

Death In Water 31 Dec 19
Published on

ಮೊಳಕಾಲ್ಮೂರು: ತಾಲೂಕಿನ ರಾಂಪುರ ಸಮೀಪ ಗುಡೇಕೋಟೆಗೆ ಹೋಗುವ ರಸ್ತೆ ಬದಿಯ ಚಿಕ್ಕೆರೆಯಲ್ಲಿ ಬುಧವಾರ ಕುರಿ ಮೈತೊಳೆಯುತ್ತಿದ್ದ ಇಬ್ಬರು ಕುರಿಗಾಹಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ರಾಂಪುರದ ಬಸವೇಶ್ವರ ನಗರ ನಿವಾಸಿ ಕರಿಯಣ್ಣ (30), ಕೂಡ್ಲಿಗಿ ತಾಲೂಕಿನ ಮಾಡನಹಳ್ಳಿ ನಿವಾಸಿ ಪಾಂಡು (28) ಮೃತರು. ಬೆಳಗ್ಗೆ 11 ಗಂಟೆ ಸಮಯದಲ್ಲಿ ಕರೆಯಲ್ಲಿ ಕಾಲುಜಾರಿ ಬಿದ್ದಿದ್ದಾರೆ. ರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net