

ಪೆರ್ಲ: ಚೆಮ್ನಾಡ್ ಜಮಾಯತ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಕಾಸರಗೋಡು ಜಿಲ್ಲಾಮಟ್ಟದ ಸಮಾಜ ವಿಜ್ಞಾನ ಮೇಳದ ಪ್ರತಿಕೃತಿ ಮಾದರಿ (ಸ್ಟಿಲ್ ಮೋಡೆಲ್) ರಚನೆ ಹೈಸ್ಕೂಲ್ ವಿಭಾಗದ ಸ್ಪರ್ಧೆಯಲ್ಲಿ ಎ ಗ್ರೇಡಿನೊಂದಿಗೆ ಪ್ರಥಮ ಸ್ಥಾನ ಗಳಿಸಿ ಶೇಣಿ ಶಾಲಾ ವಿದ್ಯಾರ್ಥಿಗಳಾದ ಅಭಿದೀಪ್ ಎಚ್.ಕೆ ಮತ್ತು ಲಕ್ಷ್ಮೀಪ್ರಿಯ ಎಸ್. ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಭಾರತದಲ್ಲಿ ಸುಸ್ಥಿರ ಅಭಿವೃದ್ಧಿ ಎಂಬ ವಿಷಯದ ಆಧಾರದಲ್ಲಿ ಇವರು ತಯಾರಿಸಿದ ಮಾದರಿ ಪ್ರಥಮ ಸ್ಥಾನ ಗಳಿಸಿದೆ.