ಒಂದು ವಾರದೊಳಗೆ ಆಶ್ರಯ ಮನೆ ಹಂಚಿಕೆ

SGN manavi
Published on

ಶಿಗ್ಗಾಂವಿ: ಪಟ್ಟಣದಲ್ಲಿ ನಿರ್ಮಿಸಿರುವ ಜಿ+1 ಮನೆಗಳನ್ನು ಮೇ 15ರೊಳಗೆ ವಿತರಿಸದಿದ್ದರೆ ಅಕ್ರಮವಾಗಿ ಮನೆ ಪ್ರವೇಶಿಸಲಾಗುವುದು ಎಂದು ಆಶ್ರಯ ಫಲಾನುಭವಿಗಳು ಶಾಸಕ ಯಾಸೀರಖಾನ್ ಪಠಾಣ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

2023ರಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಡವರಿಗೆ ನಿರ್ಮಿಸಿದ ಮನೆ ವಿತರಣೆ ವಿಳಂಬದಿಂದ ಬಡವರಿಗೆ ಸಂಕಷ್ಟ ಎದುರಾಗಿದೆ. ಹಲವು ವರ್ಷಗಳಿಂದ ಹಣ ಕಟ್ಟಿರುವ ಬಡವರು ಮನೆ ಸಿಗುತ್ತದೆ ಎಂದು ಪುರಸಭೆಗೆ ಅಲೆದಾಡುತ್ತಲೇ ಇದ್ದಾರೆ. ಮನೆ ಕೊಡುವ ಭರವಸೆ ನೀಡುತ್ತಿರುವ ಅಧಿಕಾರಿ, ಜನಪ್ರತಿನಿಧಿಗಳು ಉತ್ತರ ಕೊಡುತ್ತಲೇ ಬರುತ್ತಿದ್ದಾರೆಯೇ ಹೊರತು, ಮನೆ ವಿತರಣೆಗೆ ಕ್ರಮಕೈಗೊಳ್ಳುತ್ತಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿದ ಶಾಸಕರು, ಈಗಾಗಲೇ ಈ ಕುರಿತು ಎರಡ್ಮೂರು ಸಭೆ ನಡೆಸಲಾಗಿದೆ. ಒಂದು ವಾರದೊಳಗೆ ಆಶ್ರಯ ಸಮಿತಿ ಸಭೆ ನಡೆಸಿ ಅರ್ಹ ಫಲಾನಭವಿಗಳಿಗೆ ಮನೆ ವಿತರಿಸಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಅಸ್ಮಾ ದೇವಸೂರು, ಭಾರತಿ ಪೂಜಾರ, ಕಿಶೋರ ದೋತ್ರದ, ಶಾಂತಕ್ಕ ಗಡ್ಡಿಯವರ, ಮಂಜುಳಾ ತಡಸ, ವಿಜಯಲಕ್ಷ್ಮೀ ಅಂಬಿಗೇರ, ಗಾಯಿತ್ರಿ ಮಾಳೋಧೆ, ವಿಠ್ಠಲ ಮಾಳೋಧೆ, ವೀರಣ್ಣ ಗಡ್ಡಿಯವರ, ಮೌಲಾಲಿ ನವಲಗುಂದ, ಅಲ್ಲಾವುದ್ದೀನ ಜಮಾದಾರ, ಲಕ್ಷ್ಮಣ ಉಪ್ಪಾರ, ಗಂಗಾಧರ ಧಾರವಾಡ, ಹನಮಂತಪ್ಪ ತಡಸಿನಕೊಪ್ಪ, ಬಸೀರಾಬಾನು, ಸಾವಿತ್ರಿ ಚವ್ಹಾಣ, ಕೃಷ್ಣಪ್ಪ ಗದಗ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net