ಭೀಮಾಶ್ರಯ ವಿಶ್ರಾಂತಿ ಗೃಹ ಉದ್ಘಾಟನೆ

bhimaashraya
Published on

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯು ವಿವಿಧ ಕಾರ್ಯಕ್ರಮಗಳ ಮೂಲಕ ಶನಿವಾರ ಪೌರ ಕಾರ್ವಿುಕರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿತು.

ಶಿರೂರ್ ಪಾರ್ಕ್ ಚೇತನ ಕಾಲೇಜ್ ಎದುರು ನಿರ್ವಿುಸಿದ ಪೌರ ಕಾರ್ವಿುಕರ ವಿಶ್ರಾಂತಿ ಗೃಹ-ಭೀಮಾಶ್ರಯವನ್ನು ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟಿಸಿದರು. ಮೇಯರ್ ವೀಣಾ ಬರದ್ವಾಡ, ಉಪ ಮೇಯರ್ ಸತೀಶ ಹಾನಗಲ್, ವಿರೋಧ ಪಕ್ಷದ ನಾಯಕಿ ಸುವರ್ಣ ಕಲ್ಲಕುಂಟ್ಲ, ಇತರರು ಪಾಲ್ಗೊಂಡಿದ್ದರು.

ಭೀಮಾಶ್ರಯವು ಪೌರ ಕಾರ್ವಿುಕರಿಗೆ ಶೌಚಾಲಯ, ಕುಡಿಯುವ ನೀರು, ವಿಶ್ರಾಂತಿ ಸ್ಥಳದ ವ್ಯವಸ್ಥೆಯನ್ನು ಹೊಂದಿದೆ. ದೈನಂದಿನ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರಕಾರ್ವಿುಕರಿಗೆ ಅತ್ಯಂತ ಅವಶ್ಯಕ ಹಾಗೂ ಉಪಯೋಗಕಾರಿ ವಿಶ್ರಾಂತಿ ಗೃಹ ಇದಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 24 ಕಂಟೇನರ್ ಮಾದರಿಯ ವಿಶ್ರಾಂತಿ ಗೃಹವನ್ನು ನಿರ್ಮಾಣ ಮಾಡಲಾಗಿದೆ ಎಂದು ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ತಿಳಿಸಿದರು.

ಪೌರ ಕಾರ್ವಿುಕರ ದಿನಾಚರಣೆ ಕಾರ್ಯಕ್ರಮವನ್ನು ಕನ್ನಡ ಭವನದಲ್ಲಿ ಆಯೋಜಿಸಲಾಗಿತ್ತು. ದಿನಾಚರಣೆ ಅಂಗವಾಗಿ ಸೆ. 21 ಮತ್ತು 22ರಂದು ಪಾಲಿಕೆಯ ಘನ ತ್ಯಾಜ್ಯ ವಸ್ತು ನಿರ್ವಹಣಾ ವಿಭಾಗವು ನೆಹರು ಮೈದಾನದಲ್ಲಿ ಪೌರ ಕಾರ್ವಿುಕರಿಗಾಗಿ ಆಯೋಜಿಸಿದ್ದ ಕ್ರಿಕೆಟ್, ಹಗ್ಗ ಜಗ್ಗಾಟ, ರಂಗೋಲಿ, ಇತ್ಯಾದಿ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಮೇಯರ್ ವೀಣಾ ಬರದ್ವಾಡ ಬಹುಮಾನ ವಿತರಿಸಿದರು.

ಪಾಲಿಕೆಯ ಅಧೀಕ್ಷಕ ಇಂಜಿನಿಯರ್ ಇ. ತಿಮ್ಮಪ್ಪ, ಇಇ ಮಲ್ಲಿಕಾರ್ಜುನ ಬಿ. ಎಂ., ಸಹಾಯಕ ಆಯುಕ್ತ ಗಿರೀಶ ತಳವಾರ, ಎಸ್. ಸಿ. ಬೇವೂರ್, ಚಂದ್ರಶೇಖರ ಮಾಲಿಪಾಟೀಲ್, ಪರಿಸರ ಇಂಜಿನಿಯರ್ ಶ್ರೀಧರ ಟಿ. ಎನ್., ಯುವರಾಜ್ ಕೆ.ಆರ್., ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net