ಕನ್ನಡಿಗರ ಆಶಯ ಈಡೇರಿಸುವ ಯತ್ನ

HN 9-4
Published on

ವಿಜಯಪುರ: ಕನ್ನಡಕ್ಕೆ ಶತಮಾನದ ಇತಿಹಾಸ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ಕನಸು ನನ್ನದು. ಕನ್ನಡಿಗರ ಆಶಯಗಳನ್ನು ನನಸಾಗಿಸಲು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ ಎಂದು ಆಕಾಂಕ್ಷಿ ಶೇಖರಗೌಡ ಮಾಲೀಪಾಟೀಲ ಹೇಳಿದರು.

ಕನ್ನಡ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ, ನಾಡು-ನುಡಿ, ಉದ್ಯೋಗ, ಗಡಿ, ಜಲ ಸಮಸ್ಯೆ ಬಗ್ಗೆ ನಿರಂತರ ಧ್ವನಿ ಎತ್ತುತ್ತ ಬಂದಿರುವೆ. ಕನ್ನಡದ ಹಿರಿಮೆ-ಗರಿಮೆ ಪ್ರತೀಕವಾಗಿರುವ ಈ ಸಾಹಿತ್ಯ ಪರಿಷತ್ ಮುನ್ನಡೆಸಲು ಸಮರ್ಥ ನಾಯಕತ್ವದ ಅಗತ್ಯವಿದೆ. ಇಂತಹ ಪ್ರಾತಿನಿಧಿಕ ಸಂಸ್ಥೆಗೆ ರಾಜ್ಯದ ಅನೇಕ ಹಿರಿಯ ಸಾಹಿತಿಗಳು, ಸಂಘಟಕರು, ಜನಪರ ಸಂಘಟನೆಗಳು ಹಾಗೂ ಕಸಾಪ ಜಿಲ್ಲಾ, ತಾಲೂಕು ಕೇಂದ್ರಗಳ ಪದಾಧಿಕಾರಿಗಳ ಒತ್ತಾಯದ ಮೇರೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಡಿ.ಆರ್.ನಿಡೋಣಿ, ಚಂದ್ರಶೇಖರ ದೇವರೆಡ್ಡಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net