ದ್ರಾವಿಡ ಭಾಷೆಗಳಲ್ಲಿ ಕನ್ನಡ ಅತ್ಯಂತ ಸತ್ವಯುತ ಭಾಷೆ: ಡಾ. ಸಜ್ಜನರ

02GDG07
ಗದಗ ಕಬ್ಬಿಗರ ಕುಟದಲ್ಲಿ ಏರ್ಪಡಿಸಿದ್ದ ಕರ್ನಾಟಕ ಕವಿಗೋಷ್ಠಿಯ ಕಾರ್ಯಕ್ರಮದಲ್ಲಿ ಡಾ. ಶೇಖರ ಸಜ್ಜನ ಮಾತನಾಡಿದರು. ಡಿ.ವಿ.ಬಡಿಗೇರ, ಮನೋಹರ ಮೇರವಾಡೆ, ಬಸವರಾಜ ಗಣಪ್ಪನವರ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ದ್ರಾವಿಡ ಭಾಷೆಗಳಲ್ಲಿ ಕನ್ನಡ ಅತ್ಯಂತ ಸತ್ವಯುತ ಭಾಷೆಯಾಗಿದೆ. ಪಂಪ, ರನ್ನ, ಕುಮಾರವ್ಯಾಸ, ಚಾಮರಸ ಮುಂತಾದ ಮಹಾನ್​ ಕವಿಗಳು ಕನ್ನಡಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ ಎಂದು ವೈದ್ಯ, ಮಾಹಿತಿ ಆಯೋಗದ ಮಾಜಿ ಆಯುಕ್ತ ಡಾ. ಶೇಖರ ಸಜ್ಜನ ಹೇಳಿದರು.
ನಗರದ ಕಬ್ಬಿಗರ ಕೂಟದ ಸಾಹಿತ್ಯ ಭವನದಲ್ಲಿ ರಾಜ್ಯೋತ್ಸವದ ನಿಮಿತ್ಯ ಬುಧವಾರ ಹಮ್ಮಿಕೊಂಡಿದ್ದ ಸಮೃದ್ಧ ಕರ್ನಾಟಕ ಕವಿಗೋಷ್ಠಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಉತ್ತರ ಕರ್ನಾಟಕ ಮೂಲಕ ಶ್ರೇಷ್ಠ ಸಾಹಿತಿಗಳು ಕನ್ನಡದ ಗಟ್ಟಿ ಭಾಷೆಯಲ್ಲಿ ಕೃತಿ ರಚಿಸಿ ಕನ್ನಡ ಸಾಹಿತ್ಯ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ. ಗಂಗ ಕದಂಬ ರಾಷ್ಟ್ರಕೂಟ ಚಾಲುಕ್ಯ ವಿಜಯನಗರ ಮುಂತಾದ ಕನ್ನಡ ರಾಜಮನೆತನಗಳು ಕನ್ನಡ ನಾಡು ನುಡಿ ಕಲೆ ಸಂಸತಿಯ ಉತ್ಕರ್ಷಕ್ಕೆ ಶ್ರಮಿಸಿದ್ದಾರೆ ಎಂದರು.
ಬೆಳೆಯುವ ಮಕ್ಕಳಿಗೆ ಪರಭಾಷೆಯ ಪರದೆ ಹೊಚ್ಚಿ ಉಸಿರುಗಟ್ಟಿಸುವದಕ್ಕಿಂತ ಮಾತೃ ಭಾಷೆಯಲ್ಲಿ ಮಕ್ಕಳಿಗೆ ಪ್ರಾಥಮಿಕ ಶಿಣ ಕೊಡಿಸಬೇಕು. ಕಲಿತ ಭಾಷೆಗಿಂತ ಹೃದಯಭಾಷೆ ಪ್ರಭಾವಕಾರಿ. ಮಾತೃಭಾಷೆಯಲ್ಲಿ ಮಕ್ಕಳು ಓದಿದರೆ ಜ್ಞಾನಾರ್ಜನೆಗೆ ಅನುಕೂಲವಾಗುತ್ತದೆ. ಇಲ್ಲವಾದರೆ ಮಕ್ಕಳು ಕಂಠಪಾಠ ಸಂಸತಿಗೆ ಒಗ್ಗಿಕೊಂಡು ಪಾಠ ಒಪ್ಪಿಸುವ ಸಾಕಿದ ಗಿಳಿಗಳಾಗುತ್ತಾರೆ. ಮಕ್ಕಳನ್ನು ಮಾತೃಭಾಷೆಯಲ್ಲೇ ಓದಿಸಲು ಪಾಲಕರು ದೃಢ ಮನಸ್ಸು ಮಾಡಬೇಕು. ಇಂಗ್ಲೀಷ ಮಾಧ್ಯಮದ ಹಾವಳಿ ತಡೆಯಬೇಕು ಎಂದು ಹೇಳಿದರು.
ಕಬ್ಬಿಗರ ಕೂಟದ ಸಂಸ್ಥಾಪಕ ಡಿ.ವಿ.ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಮನೋಹರ ಮೇರವಾಡೆ, ಬಸವರಾಜ ಗಣಪ್ಪನವರ, ಎಸ್​. ಎಸ್​. ಮಲ್ಲಾಪೂರ, ಬಿ.ಎಸ್​. ಹಿಂಡಿ, ರತ್ನಕ್ಕ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net