ಶೀಟ್ ರೂಪಿಂಗ್ ಉದ್ಘಾಟನೆ

29 KRN-5
ಕೆ.ಆರ್.ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮುಂಭಾಗ ದಾನಿಗಳಿಂದ ನಿರ್ಮಾಣವಾಗಿರುವ ಶೀಟ್ ರೂಪಿಂಗ್ ಅನ್ನು ಶಾಸಕ ಡಿ.ರವಿಶಂಕರ್ ಉದ್ಘಾಟಿಸಿದರು. ಕೆ.ಎಸ್.ಮಹೇಶ್, ಕೋಳಿ ಪ್ರಕಾಶ್, ಡಾ.ಡಿ.ನಟರಾಜ್, ಡಾ.ನವೀನ್‌ಕುಮಾರ್,ಡಾ.ದರ್ಶನ್, ಎಚ್.ಎಚ್.ನಾಗೇಂದ್ರ, ನೆನ್ ಮಲ್ ಜೀ, ಮಹೇಂದ್ರ, ಮುಖೇಶ್ ಇತರರು ಇದ್ದರು.
Published on

ಕೆ.ಆರ್.ನಗರ: ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮುಂಭಾಗದಲ್ಲಿ ಪಟ್ಟಣದ ದಾನಿಗಳ ನೆರವಿನಿಂದ ನಿರ್ಮಿಸಿರುವ ಶೀಟ್ ರೂಪಿಂಗ್(ಶೀಟಿನ ಛಾವಣಿ) ಅನ್ನು ಶಾಸಕ ಡಿ.ರವಿಶಂಕರ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಉಳ್ಳವರು ಕೇವಲ ತಮ್ಮ ಹಿತ ಕಾಪಾಡುಕೊಳ್ಳುವ ಜತೆಗೆ ಸಮಾಜಕ್ಕೆ ತಮ್ಮಿಂದಾದ ಸಹಾಯ ಮತ್ತು ಸೇವೆ ಮಾಡಬೇಕು. ಆ ಮನೋಭಾವ ಎಲ್ಲರಲ್ಲೂ ಇರುವುದಿಲ್ಲ ಆದರೆ ಅದನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡರೆ ಸಮಾಜ ಸುಧಾರಣೆಯಾಗಲಿದೆ ಎಂದು ಹೇಳಿದರು.

ಪಟ್ಟಣದ ಮಹೇಂದ್ರ ಮೆಡಿಷನ್ ಮಾಲೀಕರು ಮತ್ತು ಅವರ ಕುಟುಂಬ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮುಂಭಾಗದಲ್ಲಿ ಶೀಟ್ ರೂಪಿಂಗ್ ಮಾಡಿಸಿಕೊಟ್ಟಿದ್ದು, ಸಮಾಜ ಸೇವಾ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಇವರ ಇಂತಹ ಸಮಾಜಮುಖಿ ಕೆಲಸಗಳು ಇತರರಿಗೆ ಪ್ರೇರಣೆಯಾಗಿದೆ ಎಂದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಪುರಸಭಾ ಸದಸ್ಯ ಕೋಳಿ ಪ್ರಕಾಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜ್, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ನವೀನ್‌ಕುಮಾರ್, ವೈದ್ಯ ಡಾ.ದರ್ಶನ್, ಆರೋಗ್ಯ ರಕ್ಷಾ ಕಮಿಟಿ ಸದಸ್ಯ ಎಚ್.ಎಚ್.ನಾಗೇಂದ್ರ, ಮಹೇಂದ್ರ ಮೆಡಿಷನ್ ಮಾಲೀಕ ನೆನ್‌ಮಲ್ ಜೀ, ಪುತ್ರರಾದ ಮಹೇಂದ್ರ, ಮುಖೇಶ್, ಅಕ್ಷಯ್, ಕುಲದೀಪ್, ಮುಖಂಡರಾದ ಪ್ರಕಾಶ್ ಘನ್ನಾ, ಪ್ರಭುಲಾಲ್ ಪ್ರಕಾಶ್, ಸತೀಶ್ ಚಾವತ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net