ರೈತರ ಆರ್ಥಿಕತೆಗೆ ಸಹಕಾರಿ ಸಂಘಗಳು ಪೂರಕ

ANNIVERSARY
ಹನುಮಸಾಗರದ ಶ್ರೀ ಕನಕದಾಸ ಪತ್ತಿನ ಸಹಕಾರಿ ಸಂಘದ 13ನೇ ವಾರ್ಷಿಕೊತ್ಸವವನ್ನು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಶರಣು ತಳ್ಳಿಕೆರಿ ಉದ್ಘಾಟಿಸಿದರು. ಬಿಜೆಪಿ ತಾಲೂಕು ಅಧ್ಯಕ್ಷ ಬಸವರಾಜ ಹಳ್ಳೂರು, ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಉಪಾಧ್ಯಕ್ಷೆ ಹನಮಮ್ಮ ಕಂದಗಲ ಇತರರಿದ್ದರು.
Published on

ಹನುಮಸಾಗರ: ಸಹಕಾರಿ ಸಂಘಗಳು ರೈತರು ಹಾಗೂ ವ್ಯಾಪಾರಿಗಳಿಗೆ ಸಾಲ ನೀಡುವ ಮೂಲಕ ಅವರ ಪ್ರಗತಿ ಜತೆಗೆ ಸಂಘಗಳೂ ಅಭಿವೃದ್ಧಿಪತದತ್ತ ದಾಪುಗಾಲು ಇಡಬೇಕು ಎಂದು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಶರಣು ತಳ್ಳಿಕೆರಿ ಹೇಳಿದರು.

ಪಟ್ಟಣದ ಶ್ರೀ ಕನಕದಾಸ ಪತ್ತಿನ ಸಹಕಾರಿ ಸಂಘದ 13ನೇ ವಾರ್ಷಿಕೊತ್ಸವ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರಿಗೆ ಸಹಕಾರಿ ಸಂಘಗಳು ಆರ್ಥಿಕವಾಗಿ ಸಹಕಾರಿಯಾಗಿವೆ. ಸಾಲ ಪಡೆಯುವವರು ನಿಗದಿತ ಸಮಯದಕ್ಕೆ ಮರು ಪಾವತಿಸಿದರೆ ಅಭಿವೃದ್ಧಿ ಸಾಧ್ಯ ಎಂದರು.

ರೈತ ಚೆನ್ನಾಗಿದ್ದರೆ ಮಾತ್ರ ನಾವೆಲ್ಲರೂ ಚೆನ್ನಾಗಿರಲು ಸಾಧ್ಯ. ಅದಕ್ಕಾಗಿ ಸಹಕಾರಿ ಸಂಘಗಳು ರೈತರಿಗೆ ಸಾಲ ನೀಡುವ ಮೂಲಕ ಆರ್ಥಿಕವಾಗಿ ಸಬಲರಾಗುವಂತೆ ಮಾಡಬೇಕು. ಸಣ್ಣ-ಪುಟ್ಟ ವ್ಯಾಪಾರಿಗಳಿಗೆ ಸಹಕಾರಿ ಸಂಘಗಳು ನೀಡುವ ಸಾಲ ವ್ಯಾಪಾರ ವಹಿವಾಟಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಬಸವರಾಜ ಹಳ್ಳೂರು ಮಾತನಾಡಿ, ಸಹಕಾರಿ ಸಂಘಗಳು ಸದೃಢವಾಗಿ ಬೆಳೆಯಲು ಷೇರುದಾರರು ಪ್ರಮುಖರಾಗುತ್ತಾರೆ. ಈ ಸಂಘದಲ್ಲಿ 15 ಸಿಬ್ಬಂದಿ, 15 ಜನ ಪಿಗ್ಮಿ ಏಜೆಂಟರಾಗಿ ಕೆಲಸ ನಿರ್ವಹಿಸುತ್ತಿರುವುದು ಇದರ ಪ್ರಗತಿಯನ್ನು ಸೂಚಿಸುತ್ತದೆ ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಉಪಾಧ್ಯಕ್ಷೆ ಹನುಮವ್ವ ಕಂದಗಲ್ಲ, ವಕೀಲ ವಿಜಯಮಾಂತೇಶ ಕುಷ್ಟಗಿ, ಪ್ರಮುಖರಾದ ಹನುಮಂತಪ್ಪ ಬಿಂಗಿ, ನಾಗರಾಜ ಹಕ್ಕಿ, ಅಂದಾನಪ್ಪ ಬಿಂಗಿ, ಬಸವರಾಜ ಅಕ್ಕಿ, ಭರಮಪ್ಪ ಬಿಂಗಿ, ಹಿರಗಪ್ಪ ಗಡೇಕಾರ, ಚನ್ನಬಸಪ್ಪ ಹಕ್ಕಿ, ಶಂಕ್ರಪ್ಪ ಬಾಗಲಿ, ಶ್ರೀಕಾಂತ ಕೊಳೂರ, ಗೀತಾ ಸೊಪ್ಪಿಮಠ. ಗುರುಸಿದ್ದಪ್ಪ ಅಂಗಡಿ, ಮುತ್ತು ರಾಥೋಡ, ರಾಮನಗೌಡ್ರ, ಹನುಮಂತ ಪಲ್ಲೆದ, ಹನುಮಂತಪ್ಪ ಸಜ್ಜನರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net