ಲಾರಿ ಡಿಕ್ಕಿಯಾಗಿ ಕುರಿಗಳು ಸಾವು

sheep death
Published on

ಮುಂಡರಗಿ: ಲಾರಿ ಹರಿದು ಕುರಿಗಳು ಸಾವನಪ್ಪಿದ ಘಟನೆ ತಾಲೂಕಿನ ಕೊರ್ಲಹಳ್ಳಿ- ಬೆಣ್ಣಿಹಳ್ಳಿ ಗ್ರಾಮಗಳ ಮಧ್ಯದ ಅರಭಾವಿ-ಚಳ್ಳಕೆರೆ ರಾಜ್ಯ ಹೆದ್ದಾರಿಯಲ್ಲಿ ಸೋಮವಾರ ರಾತ್ರಿ ನಡೆದಿದೆ. ರಸ್ತೆಯಲ್ಲಿ ಕುರಿಗಳು ಸಾಗುತ್ತಿರುವುದನ್ನು ನೋಡಿ ಒಂದು ಲಾರಿ ನಿಂತಿತ್ತು. ಆದರೆ, ನಿಂತ ಲಾರಿಗೆ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದ ಕಾರಣ 10-12 ಕುರಿಗಳು ಸಾವನಪ್ಪಿವೆ. ಡಿಕ್ಕಿ ಹೊಡೆದ ಲಾರಿಯ ಮುಂಭಾಗವು ನಜ್ಜುಗುಜ್ಜಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net