ಚಿರತೆಯಿಂದ ಪಾರಾದ ಕುರಿ

19 HANUR 5
ಜಿ.ಆರ್ ನಗರದಲ್ಲಿ ಚಿರತೆ ದಾಳಿಯಿಂದ ಗಾಯಗೊಂಡ ಮೇಕೆ ಚೇತರಿಸಿಕೊಳ್ಳುತ್ತಿರುವುದು.
Published on

ಹನೂರು: ತಾಲೂಕಿನ ಅಜ್ಜೀಪುರ ಗ್ರಾಪಂ ವ್ಯಾಪ್ತಿಯ ಜಿ.ಆರ್. ನಗರದ ತೋಟದಮನೆ ಕೊಟ್ಟಿಗೆಗೆ ಬುಧವಾರ ಚಿರತೆ ದಾಳಿ ಇಟ್ಟು ಕುರಿ ಎಳೆದೊಯ್ಯಲು ಯತ್ನಿಸಿ ವಿಫಲವಾಗಿದ್ದು, ಅದೃಷ್ವವಶಾತ್ ಕುರಿ ಪಾರಾಗಿದೆ.

ಗ್ರಾಮ ನಿವಾಸಿ ಸುಬ್ರಹ್ಮಣ್ಯ ಅವರ ತೋಟದ ಮನೆಯ ಕೊಟ್ಟಿಗೆಯಲ್ಲಿ ಎಂದಿನಂತೆ ಕುರಿಗಳನ್ನು ಕೂಡಿದ್ದರು. ಬೆಳಗ್ಗೆ ಕೊಟ್ಟಿಗೆಗೆ ದಾಳಿ ಇಟ್ಟ ಚಿರತೆ ಕುರಿಯೊಂದನ್ನು ಎಳೆದೊಯ್ಯುತ್ತಿತ್ತು. ಕುರಿ ಚೀರಾಟ ಕೇಳಿ ಸುಬ್ರಹ್ಮಣ್ಯ ಅವರು ಮನೆಯಿಂದ ಹೊರ ಬಂದು ಕಿರುಚಿದಾಗ ಚಿರತೆ ಕುರಿಯನ್ನು ಅಲ್ಲಿಯೇ ಬಿಟ್ಟು ಕಾಲ್ಕಿತ್ತಿದೆ. ದಾಳಿಯಿಂದ ಗಾಯಗೊಂಡ ಕುರಿಗೆ ಚಿಕಿತ್ಸೆ ಕೊಡಿಸಿದ್ದು, ಚೇತರಿಸಿಕೊಳ್ಳುತ್ತಿದೆ.

ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಚಿರತೆ ಸೆರೆಗೆ ರೈತರು ಒತ್ತಾಯಿಸಿದ್ದು, ಬೋನು ಇರಿಸುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net