ಕುರಿ ಕದ್ದ ಇಬ್ಬರ ಬಂಧನ

Sheep and goats arrested
ಕುರಿ ಕದ್ದವರಿಂದ ವಶಕ್ಕೆ ಪಡೆದಿರುವ ವಾಹನ ಹಾಗೂ ನಗದು ಜತೆಗೆ ಹುಗುಂದ ಪೊಲೀಸರು. ಪಿಎಸ್‌ಐ ಪ್ರಕಾಶ ಡಿ, ಎಎಸ್‌ಐ ಎಸ್.ಬಿ ಆಮದಿಹಾಳ, ಮಲ್ಲು ನಾರಗಲ್ ಇದ್ದಾರೆ.
Published on

ಹುನಗುಂದ: ತಾಲೂಕಿನ ಗಟ್ಟಿಗನೂರ ಗ್ರಾಮದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ 17 ಕುರಿಗಳನ್ನು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಹುನಗುಂದ ಠಾಣೆ ಪೊಲೀಸರು ಮಂಗಳವಾರ ಧನ್ನೂರ ಕ್ರಾಸ್‌ನಲ್ಲಿ ಬಂಧಿಸಿದ್ದಾರೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಪರಶುರಾಮ ಲತ್ತಿಗೇರಿ (24) ಹಾಗೂ ಮಲ್ಲಿಕಾರ್ಜುನ ಬಂಡಿ (24) ಬಂಧಿತರು. ಕುರಿ ಸಾಗಣೆಗೆ ಬಳಸುತ್ತಿದ್ದ 4.5 ಲಕ್ಷ ರೂ. ಮೌಲ್ಯದ ಎರಡು ವಾಹನ ಹಾಗೂ 70 ಸಾವಿರ ನಗದನ್ನು ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದೆ ಎಂದು ಪಿಎಸ್‌ಐ ಪ್ರಕಾಶ ಡಿ. ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net