

ಹುಬ್ಬಳ್ಳಿ: ಹá--ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಸೇವಾ ದಳದ ಕಾರ್ಯದರ್ಶಿಯಾಗಿ ಶೀಲಾ ಕುಸಬಿ ಅವರನ್ನು ನೇಮಕ ಮಾಡಲಾಗಿದೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಮಹಾನಗರ ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ದೊಡ್ಡರಾಮಪ್ಪ ದೊಡ್ಡಮನಿ ಅವರು ಕುಸಬಿ ಅವರಿಗೆ ನೇಮಕದ ಆದೇಶ ಪತ್ರ ನೀಡಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನವೀದ್ ಮುಲ್ಲಾ, ರಫೀಕ ಚವ್ಹಾಣ, ಶ್ರೀಧರ ನಾಯ್ಕರ, ಪ್ರಶಾಂತ ಬಾವೂರ, ಸೋಮಕುಮಾರ ಕುಸಬಿ, ಸುಜಾತ್ ಅಲಿ ಹೊಸಮನಿ, ಇತರರು ಇದ್ದರು.