ಶೀಘ್ರ ಬಿಜೆಪಿ ಸರ್ಕಾರ ಪತನ: ಸಂಸದ ಡಿ.ಕೆ. ಸುರೇಶ್ ಭವಿಷ್ಯ

29 RMN-MGD p1
Published on

ಮಾಗಡಿ: ರಾಜ್ಯ ಸರ್ಕಾರದ ಆಯಸ್ಸು ಕಡಿಮೆಯಾಗಿದ್ದು, ಆಡಳಿತಾರೂಢ ಬಿಜೆಪಿ ಪಕ್ಷದವರೇ ಶೀಘ್ರದಲ್ಲಿ ಸರ್ಕಾರ ಬೀಳಿಸಲಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ ಭವಿಷ್ಯ ನುಡಿದರು.

ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಪದಗ್ರಹಣ ಹಿನ್ನೆಲೆಯಲ್ಲಿ ಮಾಗಡಿಯ ಹೊಸಹಳ್ಳಿಯ ತೋಟದ ಮನೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದರು.

ನಾಲ್ಕು ತಿಂಗಳೊಳಗೆ ಬಿ.ಎಸ್.ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಾರೆ. ಸರ್ಕಾರ ಉರುಳಿಸುವ ಕಾರ್ಯ ಬುಧವಾರ ದಿಂದಲೇ ಆರಂಭ ವಾಗಿದೆ. ಕಾಂಗ್ರೆಸ್‌ನವರು ಸರ್ಕಾರ ಬೀಳಿಸುವ ಅಗತ್ಯವಿಲ್ಲ, ಬಿಜೆಪಿಯವರೇ ಬೀಳಿಸುವುದರಿಂದ ಚುನಾವಣೆ ಬರುತ್ತದೆ. ಇದಕ್ಕೆ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಸಜ್ಜಾಗಿ ಪಕ್ಷ ಸಿದ್ಧಗೊಳಿಸಬೇಕಾಗಿದೆ ಎಂದರು.

ಮಾಗಡಿಯಲ್ಲಿ ಎಚ್.ಸಿ.ಬಾಲಕೃಷ್ಣ ಅವರನ್ನು ಮತ್ತೆ ಶಾಸಕರನ್ನಾಗಿ ಮಾಡುವ ಮೂಲಕ ವಿರೋಧಿಗಳಿಗೆ ಉತ್ತರ ಕೊಡಬೇಕು ಎಂದು ವಿರೋಧ ಪಕ್ಷದವರಿಗೆ ಟಾಂಗ್ ನೀಡಿದರು.

ಎಚ್.ಸಿ.ಬಾಲಕೃಷ್ಣ ಮಾತನಾಡಿ, ನಾನು ಬೇರೆ ಪಕ್ಷಕ್ಕೆ ಹೋಗುತ್ತೇನೆ ಎಂಬ ಗೊಂದಲ ಎಲ್ಲರಿಗೂ ಇದೆ. ಆ ಗೊಂದಲಕ್ಕೆ ತೆರೆ ಎಳೆದು ಎಲ್ಲರೂ ಕಾಂಗ್ರೆಸ್ ಕಟ್ಟೋಣ. ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ಗೆ ನೆಲೆ ಇಲ್ಲ. ಆದರೂ 2 ಸ್ಥಾನ ಗೆಲ್ಲುತ್ತದೆ. ಪ್ರಾಮಾಣಿಕತೆಯಿಂದ ಪಕ್ಷ ಸಂಘಟಿಸಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಈ ಕ್ಷೇತ್ರವನ್ನು ಗೆಲ್ಲಬಹುದು ಎಂದರು.

ತಾಪಂ ಅಧ್ಯಕ್ಷ ನಾರಾಯಣಪ್ಪ, ಸ್ಥಾಯಿಸಮಿತಿ ಅಧ್ಯಕ್ಷ ಧನಂಜಯನಾಯ್ಕ, ಸದಸ್ಯರಾದ ಶಿವರಾಜು, ಸುರೇಶ್, ಸುಮಾ ರಮೇಶ್, ಜಿ.ಪಂ.ಮಾಜಿ ಸದಸ್ಯರಾದ ವಿಜಯ್ ಕುಮಾರ್, ಧನಂಜಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗಾಣಕಲ್ಲು ನಟರಾಜು, ಗಂಗಾಧರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net