ಭೂತಾಯಿಗೆ ವಿಶೇಷ ಪೂಜೆ

31MDG2 A
Published on

ಮುಂಡರಗಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೈತರು ಸಂಭ್ರಮದಿಂದ ಶೀಗೆ ಹುಣ್ಣಿಮೆ ಆಚರಿಸಿದರು. ಬೆಳೆಗಳಿಗೆ ಪೂಜೆ ಮಾಡಿ ಕುಟುಂಬದೊಂದಿಗೆ ಸಹ ಭೋಜನ ಸವಿದರು.

ಚಕ್ಕಡಿ, ಟ್ರ್ಯಾಕ್ಟರ್, ಟಂಟಂ ಮೊದಲಾದ ವಾಹನಗಳಲ್ಲಿ ಬಂಧá--ಬಾಂಧವರೊಂದಿಗೆ ತಮ್ಮ ಜಮೀನುಗಳಿಗೆ ತೆರಳಿದ ರೈತರು, ಭೂತಾಯಿಗೆ ವಿಶೇಷ ಪೂಜೆ ನೆರವೇರಿಸಿದರು. ಪಾಂಡವರು ಹಾಗೂ ಬೆಳೆಗೆ ಪೂಜೆ ಸಲ್ಲಿಸಿದರು.

ಪ್ರಕೃತಿ ಹಾಗೂ ಭೂತಾಯಿ ನೆಮ್ಮದಿಯಿಂದ ಇರಲಿ ಎಂದು ಪ್ರಾರ್ಥಿಸಿ ರೈತ ಮಹಿಳೆಯರು ಕುಟುಂಬದ ಸದಸ್ಯರೊಂದಿಗೆ ಭೂತಾಯಿಗೆ ಹೊಸ ಬಟ್ಟೆ, ಎಲೆ, ಅಡಕೆ, ಫಲ, ತಾಂಬೂಲ, ಅರಿಷಿಣ, ಕುಂಕುಮ ನೀಡಿ ಉಡಿ ತುಂಬಿದರು. ನಂತರ ಬೆಳೆಗೆ ಚರಗ ಚಲ್ಲಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net