ಕುರಿಗಳಿಗೆ ಸಿಡುಬು ರೋಗ ; ಕೆ.ಹೊಸಳ್ಳಿಯಲ್ಲಿ ವ್ಯಾದಿ ಉಲ್ಭಣ ; ಪಶು ಇಲಾಖೆಯಲ್ಲಿ ವ್ಯಾಕ್ಸಿನ್ ಸ್ಟಾಕ್ ಇಲ್ವಂತೆ!

27tvk01 kuri sidubu
Published on

ತುರುವೇಕೆರೆ: ತಾಲೂಕಿನಲ್ಲಿ ಕುರಿಗಳಿಗೆ ಸಿಡುಬು ರೋಗ ಕಾಣಿಸಿಕೊಂಡಿದ್ದು, ಕುರಿ ಸಾಗಣೆ ಹಾಗೂ ಉಣ್ಣೆ ಉದ್ಯಮ ನೆಚ್ಚಿಕೊಂಡ ಕುಟುಂಬವನ್ನು ಸಂಕಷ್ಟಕ್ಕೀಡು ಮಾಡಿದೆ, ಇಷ್ಟೇ ಅಲ್ಲದೆ ರೋಗಕ್ಕೆ ಪಶು ಇಲಾಖೆಯಲ್ಲಿ ಲಸಿಕೆ ದಾಸ್ತಾನು ಇಲ್ಲ ಎನ್ನುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ತಾಲೂಕಿನಲ್ಲಿ ಸುಮಾರು 54 ಸಾವಿರಕ್ಕೂ ಹೆಚ್ಚು ಕುರಿಗಳನ್ನು ಸಾಕಣೆ ಮಾಡಲಾಗುತ್ತಿದೆ. ಕೆಲವು ದಿನಗಳಿಂದ ರೋಗ ಉಲ್ಬಣಗೊಂಡಿದ್ದು, ತಾಲೂಕಿನಾದ್ಯಂತ ವ್ಯಾಪಿಸುವ ಆತಂಕ ಶುರುವಾಗಿದೆ. ಕೆ.ಹೊಸಳ್ಳಿಯಲ್ಲಿ ಸುಮಾರು 400ಕ್ಕೂ ಹೆಚ್ಚು ಕುರಿಗಳನ್ನು ಸಾಕಾಣೆ ಮಾಡಲಾಗುತ್ತಿದ್ದು, ಚಂದ್ರಣ್ಣ, ದೊಡ್ಡಯ್ಯ, ರಮೇಶ್, ಮನು ಎಂಬುವರ ಕುರಿಗಳಲ್ಲಿ ರೋಗ ಕಾಣಿಸಿಕೊಂಡಿದೆ.

ಆರಂಭದಲ್ಲಿ ಕುರಿಗಳ ಬಾಲದ ಕೆಳಗೆ, ಕಂಕಳು, ಪಕ್ಕೆ ಹತ್ತಿರ ಸಣ್ಣ ಗುಳ್ಳೆಗಳಾಗುತ್ತವೆ. ನಂತರ ಜ್ವರ ಬಾಧಿಸಿ ಕುರಿ ಮೇವು ತಿನ್ನುವುದನ್ನು ನಿಲ್ಲಿಸುತ್ತದೆ, ವ್ಯಾದಿ ಸಾಂಕ್ರಾಮಿಕವಾಗಿರುವುದರಿಂದ ಇತರ ಕುರಿಗಳಿಗೂ ಬಹುಬೇಗ ಹರಡುವ ಸಾಧ್ಯತೆ ಇರುವುದು ರೈತರನ್ನು ಕಂಗಾಲಾಗಿಸಿದೆ.

ರೋಗದ ಹತೋಟಿಗೆ ಕೂಡಲೇ ಲಸಿಕೆ ನೀಡುವಂತೆ ರೈತರು ಪಶು ಇಲಾಖೆಗೆ ಮನವಿಯನ್ನೇನೋ ಮಾಡಿದ್ದಾರೆ, ಆದರೆ ಅಧಿಕಾರಿಗಳು ನಮ್ಮಲ್ಲಿ ವ್ಯಾಕ್ಸಿನ್ ಸ್ಟಾಕ್ ಇಲ್ಲ ಎನ್ನುತ್ತಿರುವುದು ಕುರಿ ಸಾಕಣೆಯನ್ನೇ ನೆಚ್ಚಿಕೊಂಡಿರುವ ಕುಟುಂಬಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಚುಚ್ಚು ಮದ್ದು ಕಾರ್ಯಕ್ರಮ ಮಾಡುವಲ್ಲಿ ಇಲಾಖೆ ವಿಲವಾಗಿದೆ ಎಂದು ಆರೋಪಿಸಿವೆ.

ಗ್ರಾಮದ ಕುರಿಗಳಲ್ಲಿಯೂ ಸಿಡುಬು ರೋಗ ಕಾಣಿಸಿಕೊಂಡಿದೆ, ಈಗಲೇ ಲಸಿಕೆ ನೀಡುವ ಮೂಲಕ ಹತೋಟಿಗೆ ತಾರರಿದ್ದರೆ ತಾಲೂಕಿನ ಇತರೆಡೆಗೂ ಹಬ್ಬುವ ಆತಂಕವಿದೆ. ಆದರೆ ಆಸ್ಪತ್ರೆ ಹಾಗೂ ಮೆಡಿಕಲ್ ಶಾಪ್‌ನಲ್ಲಿಯೂ ಔಷಧ ಸಿಗದೆ ಪರದಾಡುತ್ತಿದ್ದೇವೆ, ಸರ್ಕಾರ ಕೂಡಲೇ ಲಸಿಕೆ ನೀಡಬೇಕು.

ಕುರಿಗಳ ಸಿಡುಬು ರೋಗ ಬೇಸಿಗೆಯಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಸಾಂಕ್ರಾಮಿಕ ರೋಗವಾಗಿರುವುದರಿಂದ ಹೆಚ್ಚು ವ್ಯಾಪಿಸಬಹುದು. ಈಗಾಗಲೇ ರೋಗಗ್ರಸ್ಥ ಕುರಿಗಳ ರಕ್ತದ ಶ್ಯಾಂಪಲ್ ಶಿರಾ ಲ್ಯಾಬ್‌ಗೆ ಕಳಿಸಲಾಗಿದ್ದು, ಸೋಮವಾರ ರಿಪೋರ್ಟ್ ಬರಬಹುದು. ರೋಗ ಕಾಣಿಕೊಂಡಿರುವ ಪ್ರದೇಶದಲ್ಲಿ ಕೂಡಲೇ ವ್ಯಾಕ್ಸಿನ್ ನೀಡಲಾಗುವುದು. ಈ ರೋಗದಿಂದ ಕುರಿಗಳು ಸಾವನ್ನಪ್ಪುದು ಕಡಿಮೆ, ರೈತರು ಹೆದರುವ ಅವಶ್ಯಕತೆ ಇಲ್ಲ. ನಾಗರಾಜು, ಸಹಾಯಕ ನಿರ್ದೇಶಕರು. ಪಶು ಇಲಾಖೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net