ಅಲೆಮಾರಿಗಳಿಂದ ಬಯಲಲ್ಲೇ ಶೌಚ

web 5
Published on

ಬಾಳೆಹೊನ್ನೂರು: ರೇಣುಕನಗರದ ಐಟಿಐ ಕಾಲೇಜು ಎದುರಿನ ನಿವೇಶನದಲ್ಲಿ ಅಲೆಮಾರಿ ಕೂಲಿ ಕಾರ್ವಿುಕರು ಮತ್ತೆ ಶೆಡ್​ಗಳನ್ನು ನಿರ್ವಿುಸಿ ಬಯಲಲ್ಲೇ ಶೌಚ ಮಾಡುತ್ತಿರುವುದರಿಂದ ಸ್ಥಳೀಯರಿಗೆ ತೀವ್ರ ಸಮಸ್ಯೆಯುಂಟಾಗಿದೆ.

ಕೂಲಿ ಕಾರ್ವಿುಕರು 15 ದಿನದಿಂದ ಏಳಕ್ಕೂ ಅಧಿಕ ಶೆಡ್​ಗಳನ್ನು ನಿರ್ವಿುಸಿ ವಾಸಿಸುತ್ತಿದ್ದಾರೆ. ಶೆಡ್​ನಲ್ಲಿರುವ ಕಾರ್ವಿುಕರು ಪ್ರತಿ ನಿತ್ಯವೂ ಬಯಲು ಪ್ರದೇಶದಲ್ಲಿ ಮಲ, ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಬಯಲು ಪ್ರದೇಶದ ಅಕ್ಕಪಕ್ಕ ಶಾಲಾ ಕಾಲೇಜುಗಳು, ವಾಸದ ಮನೆಗಳು ಇರುವುದರಿಂದ ಮೂಗು ಮುಚ್ಚಿಕೊಳ್ಳುವ ವಾತಾವರಣ ಸೃಷ್ಟಿ ಆಗಿದೆ.

ಕಳೆದ ವರ್ಷವೂ ಇದೇ ಕಾರ್ವಿುಕರು ಅನಧಿಕೃತವಾಗಿ ಶೆಡ್​ಗಳನ್ನು ನಿರ್ವಿುಸಿಕೊಂಡು ಬಯಲು ಶೌಚ ಮಾಡುತ್ತಿದ್ದರು. ಈ ಬಗ್ಗೆ ಸ್ಥಳೀಯ ಗ್ರಾಪಂ ಹಾಗೂ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದರಿಂದ ಶೆಡ್ ತೆರವುಗೊಳಿಸಲಾಗಿತ್ತು. ಈಗ ಮತ್ತೆ ಸಮಸ್ಯೆ ಎದುರಾಗಿದ್ದು, ಗ್ರಾಪಂ ಅಧಿಕಾರಿಗಳು ಕೂಡಲೇ ಅನಧಿಕೃತ ಶೆಡ್​ಗಳನ್ನು ತೆರವು ಮಾಡುವಂತೆ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net