ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಥಮ ರಾಣಿ

24 Shirol 1
Published on

ಶಿರೋಳ: ನಾಡಿನ ಸ್ವಾಭಿಮಾನಕ್ಕಾಗಿ ಜೀವನ ಸಮರ್ಪಿಸಿಕೊಂಡು ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಥಮ ಮಹಿಳೆ ವೀರರಾಣಿ ಕಿತ್ತೂರ ಚನ್ನಮ್ಮಳ ದೇಶ ಪ್ರೇಮ, ಶೌರ್ಯ, ಸಾಹಸ ಇಂದಿನ ಪೀಳಿಗೆಗೆ ಆದರ್ಶ ಎಂದು ಕಲ್ಲಾಪುರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮಂಜುನಾಥ ಗಾಡಿ ಹೇಳಿದರು.

ಸಮೀಪದ ಕಲ್ಲಾಪುರ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿದ್ದ ಕಿತ್ತೂರು ಚನ್ನಮ್ಮ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ಚಂದ್ರಶೇಖರಯ್ಯ ಹಿರೇಮಠ, ನಿಂಗಣ್ಣ ಗಾಡಿ, ವೈ.ಆರ್. ಶಿವಾಪೂರ, ಡಿ.ಎಸ್. ಪಾಟೀಲ, ಬಿ.ವಿ. ಪಾಟೀಲ, ರಮೇಶ ಕಿತ್ತೂರ, ಶಿವಾನಂದ ಸಪಡ್ಲ, ಭೀಮಪ್ಪ ಹೊಳೆಯವರ, ಶಂಕರಗೌಡ ಭರಮಗೌಡ್ರ, ಶಿವಾನಂದ ಸೊಪ್ಪಿನ, ರಮೇಶ ತಿಪ್ಪನ್ನವರ, ಶಿವಕಾಂತ ತಗಲದಾರ, ಈರಪ್ಪ ಅಸೂಟಿ, ಬಸು ಹಂಪನ್ನವರ, ಶಿವನಗೌಡ ಮುಳಗುಂದ, ಮುತ್ತನಗೌಡ ಪಾಟೀಲ, ಕಾಂತಪ್ಪ ಮೆಣಸಗಿ, ಮಾಗುಂಡಯ್ಯ ಪೂಜಾರ, ವಿರೂಪಾಕ್ಷ ಹೂಗಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net