ಡಾ.ಅಫ್ರೀನ್ ಅವರಿಗೆ ಶಿ ಡಾಕ್ಟರ್ ಅವಾರ್ಡ್

mng-9nov-dr afreen
Published on


ಮಂಗಳೂರು : ಮಂಗಳೂರು ಮೂಲದ ವೈದ್ಯೆ ಡಾ.ಅಫ್ರೀನ್ ಮುಬೀನ್ ಶೇಖ್ ಅವರು ವೈದ್ಯರಿಗೆ ನೀಡುವ ದುಬೈನ ಪ್ರತಿಷ್ಠಿತ ಶಿ ಡಾಕ್ಟರ್ ಅವಾರ್ಡ್ ಪಡೆದಿದ್ದಾರೆ.
ಡಾ.ಅಫ್ರೀನ್ ಮಂಗಳೂರಿನ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯಿಂದ ಎಂಬಿಬಿಎಸ್ ಮತ್ತು ಐರ್ಲೆಂಡ್‌ನ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್‌ಯಿಂದ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿದ್ದಾರೆ. ವೈದ್ಯಕೀಯ ಅಭ್ಯಾಸದ ಜತೆಗೆ ಅವರು ಗಲ್ಫ್ ವೈದ್ಯಕೀಯ ಪರೀಕ್ಷೆಗಳಿಗೆ ಮಾರ್ಗದರ್ಶಕ ಮತ್ತು ತರಬೇತುದಾರರಾಗಿದ್ದಾರೆ. ಯುಎಇಯಲ್ಲಿ ಹೆಸರಾಂತ ಬ್ರಾೃಂಡ್‌ಗಳಿಗೆ ಬ್ರಾೃಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ. ಇವರು ಶರ್ಫುಲ್ಲಾ ಶೇಖ್- ಮೆಹ್ತಾಬ್ ಶೇಖ್ ದಂಪತಿ ಪುತ್ರಿ. ಅಬುದಾಬಿಯ ಡಾ.ಮಹಮ್ಮಸ್ ಮುಬೀನ್ ಅವರ ಪತ್ನಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net