ಗ್ಯಾರಂಟಿ ಯೋಜನೆ ಈಡೇರಿಸಲು ಕಾಂಗ್ರೆಸ್ ವಿಫಲ ಬಿಜೆಪಿ ರಾಷ್ಟ್ರೀಯ ವಕ್ತಾರೆ ಶಾಝಿಯಾ ಇಲ್ಮಿ ಟೀಕೆ

oklp-1485504394
Published on

ಗ್ಯಾರಂಟಿ ಯೋಜನೆ ಈಡೇರಿಸಲು ಕಾಂಗ್ರೆಸ್ ವಿಫಲ

ಮಂಗಳೂರು : ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಪ್ರತಿ ಮಹಿಳೆಗೆ ಮಾಸಿಕ 2 ಸಾವಿರ ರೂ. ನೀಡುವುದಾಗಿ ಭರವಸೆ ನೀಡಿತ್ತು. ಈ ಗ್ಯಾರಂಟಿ ಕಾಂಗ್ರೆಸ್‌ನ ಗೆಲುವಿಗೆ ಮುಖ್ಯ ಕಾರಣವಾಗಿತ್ತು. ಈಗ ಹತ್ತಾರು ನಿರ್ಬಂಧಗಳನ್ನು ಹೇರುವ ಭರವಸೆ ಈಡೇರಿಸಲು ಹೆಣಗಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರೆ ಶಾಝಿಯಾ ಇಲ್ಮಿ ಟೀಕಿಸಿದ್ದಾರೆ.
ಮಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವುದು ತೀರಾ ಕಷ್ಟಕರ ಇದರಿಂದ ಎಲ್ಲ ಇಲಾಖೆಗಳ ಬಜೆಟ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ರಾಜ್ಯದ ಅರ್ಥಿಕ ಇಲಾಖೆ ಎಚ್ಚರಿಸಿದೆ ಎಂದರು.
ಚುನಾವಣೆ ಸಂದರ್ಭ ಭರವಸೆ ನೀಡುವಾಗ ಕಾಂಗ್ರೆಸಿಗರಿಗೆ ಸುಲಭವಾಗಿತ್ತು. ಆದರೆ ಈಗ ಈಡೇರಿಸಲು ಅಸಾಧ್ಯ ಎಂದು ಸರ್ಕಾರಕ್ಕೆ ಅರಿವಾಗಿದೆ. ಗ್ಯಾರಂಟಿ ಯೋಜನೆಗಳು ರಾಜ್ಯವನ್ನು ಆದಾಯ ಕೊರತೆಯತ್ತ ತಳ್ಳುವ ಅಪಾಯವಿದೆ ಎಂದು ರಾಜ್ಯದ ಅರ್ಥಿಕ ಇಲಾಖೆಯೇ ತಿಳಿಸಿದೆ. ಹೀಗಿರುವಾಗ ರಾಜ್ಯದಲ್ಲಿ ಅಗತ್ಯವಾಗಿ ಆಗಲೇಬೇಕಾದ ಅಭಿವೃದ್ಧಿ ಕೆಲಸಗಳಿಗೆ ನ್ಯಾಯ ನೀಡಲು
ಸಾಧ್ಯವೇ? ಎಂದು ಅವರು ಪ್ರಶ್ನಿಸಿದರು.
ಶಾಸಕ ವೇದವ್ಯಾಸ ಕಾಮತ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ., ಬಿಜೆಪಿ ಮುಖಂಡರಾದ ರವಿಶಂಕರ ಮಿಜಾರು, ಜಗದೀಶ ಶೇಣವ, ರಣದೀಪ್ ಕಾಂಚನ್, ಸಂಜಯ ಪ್ರಭು ಉಪಸ್ಥಿತರಿದ್ದರು.
............................................

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net