25ರಂದು ದುರ್ಗದಲ್ಲಿ ಶೌರ್ಯ ಯಾತ್ರೆ

VHP PRESS MEET-01
Published on

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬಜರಂಗಳದ ಗಣವೇಷದಲ್ಲಿ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಚಿತ್ರದುರ್ಗ: ರಾಮ ಮಂದಿರ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿದ್ದು, ಇದರ ಹಿಂದೆ ದೇಶದ ಲಕ್ಷಾಂತರ ಭಕ್ತರ ತ್ಯಾಗ, ಬಲಿದಾನವಿದೆ. ಅವರ ಶೌರ್ಯ ಸ್ಮರಿಸಲು ಜ.25ರಂದು ನಗರದಲ್ಲಿ ಶೌರ್ಯ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಜರಂಗಳದ ರಾಜ್ಯ ದಕ್ಷಿಣ ಪ್ರಾಂತ ಸಹ ಸಂಚಾಲಕ ಪ್ರಭಂಜನ್ ಹೇಳಿದರು.

ಇಷ್ಟೊಂದು ಸಂಖ್ಯೆಯಲ್ಲಿ ಕಾರ‌್ಯಕರ್ತರು ಗಣವೇಷಧಾರಿಗಳಾಗಿ ಭಾಗವಹಿಸುತ್ತಿರುವುದು ರಾಜ್ಯದಲ್ಲೇ ಇದೇ ಪ್ರಥಮ ಎಂದರು. ಭಾರತ ಮಾತೆ, ಹನುಮಂತ, ಶ್ರೀರಾಮ ಚಿತ್ರಪಟ, ಮೂರ್ತಿಗಳೊಂದಿಗೆ ಅಂದು ಮಧ್ಯಾಹ್ನ 3 ಗಂಟೆಗೆ ಕನಕ ವೃತ್ತದಿಂದ ಆರಂಭವಾಗುವ ಯಾತ್ರೆ, ಹಳೇ ಮಾಧ್ಯಮಿಕ ಶಾಲಾ ಆವರಣ ತಲುಪಲಿದೆ.  ಸಂಜೆ 4.30ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಮೈದಾನಕ್ಕೆ ಆಗಮಿಸುವ ಮೆರವಣಿಗೆಯನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಗುವುದು ಎಂದು ತಿಳಿಸಿದರು.

ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ವಿಎಚ್‌ಪಿ ಅಖಿಲ ಭಾರತ ಸಹ ಕಾರ್ಯದರ್ಶಿ ಗೋಪಾಲ್ ಮುಖ್ಯ ಭಾಷಣ ಮಾಡಲಿದ್ದಾರೆ. ರಾಜ್ಯ ಬಜರಂಗದಳದ ದಕ್ಷಿಣ ಪ್ರಾಂತ ಸಂಚಾಲಕ ಕೆ.ಆರ್.ಸುನೀಲ್, ವಿಎಚ್‌ಪಿ ಶಿವಮೊಗ್ಗ ವಿಭಾಗದ ಕಾರ‌್ಯದರ್ಶಿ ಷಡಕ್ಷರಪ್ಪ ಉಪಸ್ಥಿತಿ ಇರುತ್ತಾರೆ ಎಂದರು. ವಿಎಚ್‌ಪಿ ಜಿಲ್ಲಾ ಕಾರ‌್ಯದರ್ಶಿ ಪಿ.ರುದ್ರೇಶ್, ಬಜರಂಗದಳದ ಜಿಲ್ಲಾ ಸಂಚಾಲಕ ಸಂದೀಪ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net