ಶೌರ್ಯ ಸ್ವಯಂ ಸೇವಕರ ತರಬೇತಿ ಕಾರ್ಯಾಗಾರ

bmr
Published on

ಬ್ರಹ್ಮಾವರ: ಬಾರಕೂರು ಕಚ್ಚೂರು ಶ್ರೀನಾಗೇಶ್ವರ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬ್ರಹ್ಮಾವರ ತಾಲೂಕು, ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ಬ್ರಹ್ಮಾವರ ತಾಲೂಕಿನ ಶೌರ್ಯ ಸ್ವಯಂ ಸೇವಕರ ತರಬೇತಿ ಕಾರ್ಯಾಗಾರ ನಡೆಯಿತು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿಯ ಪ್ರಾದೇಶಿಕ ನಿರ್ದೇಶಕ ವಿವೇಕ್ ಪಾಯಸ್ ಮಾತನಾಡಿದರು. ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕ ಅಶೋಕ್ ಕಾರ್ಯಕ್ರಮ ಉದ್ಘಾಟಿಸಿದರು. ಬಾರಕೂರು ಗ್ರಾಪಂ ಅಧ್ಯಕ್ಷ ಶಾಂತಾರಾಮ ಶೆಟ್ಟಿ, ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಯೋಜನೆಯ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ, ಕೂಡ್ಲಿ ಶ್ರೀನಿವಾಸ ಉಡುಪ, ಯೋಜನಾಧಿಕಾರಿಗಳಾದ ಜಯವಂತ್ ಪಟಗಾರ, ಕಿಶೋರ್ ಕುಮಾರ್, ಗಣೇಶ್ ಆಚಾರ್ಯ, ಶೌರ್ಯ ಸಮಿತಿಯ ಮಂಜುನಾಥ ಪೂಜಾರಿ, ಪುರುಷೋತ್ತಮ, ನಿತೇಶ್ ಕೆ. ಉಪಸ್ಥಿತರಿದ್ದರು.

ಬ್ರಹ್ಮಾವರ ತಾಲೂಕಿನ ಹಿರಿಯ ಆಟೋ ಚಾಲಕರಾಗಿ ತುರ್ತು ಸಂದರ್ಭದಲ್ಲಿ ಅಶಕ್ತರಿಗೆ ನೆರವಾದ ಸಿಲ್ವೆಸ್ಟರ್ ಸುವಾರಿಸ್ ಅವರನ್ನು ಸನ್ಮಾನಿಸಲಾಯಿತು. ಅಕಾಲಿಕವಾಗಿ ನಿಧನಾರದ ಶೌರ್ಯ ತಂಡದಲ್ಲಿದ್ದ ರಮೇಶ್ ನಾಯ್ಕ ಮನೆಯವರಿಗೆ ಸಹಾಯಧನ ವಿತರಿಸಲಾಯಿತು. ಬ್ರಹ್ಮಾವರ ತಾಲೂಕು ಯೋಜನಾಧಿಕಾರಿ ರಮೇಶ್ ಪಿ. ಸ್ವಾಗತಿಸಿದರು. ಮೇಲ್ವಿಚಾರಕ ರವೀಂದ್ರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net