ಅ.1 ರಂದು ತೇರದಾಳಕ್ಕೆ ಶೌರ್ಯ ರಥ ಯಾತ್ರೆ

Shaurya Rath Yatra to Theradal on A.1
ತೇರದಾಳ ಪಟ್ಟಣದ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ವಿಎಚ್‌ಪಿ, ಭಜರಂಗದಳ ಆಶ್ರಯದಲ್ಲಿ ಶೌರ್ಯ ರಥಯಾತ್ರೆಯ ಪೂರ್ವಭಾವಿ ಸಭೆ ಜರುಗಿತು. ಉಮೇಶ ಸಿದರೆಡ್ಡಿ, ವಿರುಪಾಕ್ಷ ಮಠದ ಅನೇಕರಿದ್ದರು.
Published on

ತೇರದಾಳ: ವಿಶ್ವ ಹಿಂದು ಪರಿಷತ್, ಭಜರಂಗದಳ ಸ್ಥಾಪನೆಗೊಂಡು 60 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಯುವಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಶೌರ್ಯ ರಥ ಪ್ರಾರಂಭಗೊಳ್ಳಲಿದ್ದು ಅ.1 ರಂದು ತೇರದಾಳ ಮತಕ್ಷೇತ್ರದ ಮಹಾಲಿಂಗಪುರಕ್ಕೆ ಪ್ರವೇಶ ಮಾಡಲಿದೆ ಎಂದು ವಿಎಚ್‌ಪಿ, ಭಜರಂಗದಳ ಜಿಲ್ಲಾ ಉಪಾಧ್ಯಕ್ಷ ಉಮೇಶ ಸಿದರೆಡ್ಡಿ ಹೇಳಿದರು.

ಪಟ್ಟಣದ ಸಿದ್ಧೇಶ್ವರ ಗಲ್ಲಿಯ ಮಲ್ಲಿಕಾರ್ಜುನ ದೇವಸ್ಥಾನದ ಸಮುದಾಯ ಭವನದಲ್ಲಿ ಶುಕ್ರವಾರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಅಂದು ಬೆಳಗ್ಗೆ 8 ಗಂಟೆಗೆ ಮಹಾಲಿಂಗಪುರ ಪಟ್ಟಣಕ್ಕೆ ಆಗಮಿಸಿ ಪ್ರಮುಖ ಬೀದಿಗಳಲ್ಲಿ ಶೌರ್ಯ ರಥ ಸಂಚರಿಸುವುದು.

ಬಳಿಕ ಚಿಮ್ಮಡ, ಯರಗಟ್ಟಿ, ಹನಗಂಡಿ ಮಾರ್ಗವಾಗಿ ತೇರದಾಳ ಪಟ್ಟಣಕ್ಕೆ ಆಗಮಿಸುವುದು. ತೇರದಾಳದಲ್ಲಿ ರಥಯಾತ್ರೆ ಮುಗಿಸಿ ಹಳಿಂಗಳಿ ಮಾರ್ಗವಾಗಿ ಹೊಸೂರ, ರಾಮಪುರ ಮೂಲಕ ರಬಕವಿ-ಬನಹಟ್ಟಿ ವ್ಯಾಪ್ತಿಗೆ ತೆರಳುವುದು. ನಾಡಿನ ಸ್ವಾತಂತ್ರೃಕ್ಕಾಗಿ ಹೋರಾಡಿದ ಪ್ರಾಣ ತ್ಯಾಗ ಮಾಡಿದ ಮಹನೀಯರ ಕುರಿತು ಜಾಗೃತಿ ಮೂಡಿಸುವುದು ಹಾಗೂ ಯುವಕರಲ್ಲಿ ದೇಶದ ಸಂಸ್ಕೃತಿಯ ಅರಿವು ಮೂಡಿಸುವ ಉದ್ದೇಶ ರಥಯಾತ್ರೆಯದ್ದಾಗಿದೆ.

ದೇಶದ ಸಂಪತ್ತು ಎಂದೇ ಬಿಂಬಿತಗೊಂಡಿರುವ ಯುವಜನಾಂಗ ದೇಶದ ಸಮೃದ್ಧಿಗೆ ಕೈಜೋಡಿಸುವ ಅವಶ್ಯಕತೆ ಇದೆ ಎಂದು ಹೇಳಿದರು.

ಸಂಘಟನೆಯ ಜಿಲ್ಲಾ ಧರ್ಮಾಚಾರ ಮುಖಂಡ ವಿರುಪಾಕ್ಷ ಮಠದ, ರಬಕವಿ-ಬನಹಟ್ಟಿ ತಾಲೂಕು ಅಧ್ಯಕ್ಷ ಉದಯ ದೇಸಾಯಿ, ಸುರೇಶ ರೇನಕೆ, ಬಸವರಾಜ ಹತರೋಡಿ, ಸಿದ್ದು ಅಮ್ಮಣಗಿ, ಬಾಳು ದೇಶಪಾಂಡೆ, ನಾಗಪ್ಪ ರಾವಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net