ಸಂಸ್ಕೃತಿ ಉಳಿವಿಗೆ ಶೌರ್ಯ ರಥ ಯಾತ್ರೆ

RATHA
Published on

ನರೇಗಲ್ಲ: ವಿಶ್ವ ಹಿಂದು ಪರಿಷತ್ ಷಷ್ಟೃಬ್ದಿ ಆಚರಣೆಯ ಹೊಸ್ತಿಲಲ್ಲಿರುವುದರಿಂದ ಜನತೆಗೆ ಹಿಂದು ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸಲು ಶೌರ್ಯ ರಥಯಾತ್ರೆಗೆ ಚಾಲನೆ ನೀಡಲಾಗಿದೆ ಎಂದು ಬಿಜೆಪಿ ಮುಖಂಡ ರವಿ ದಂಡಿನ ಹೇಳಿದರು.

ಪಟ್ಟಣದಲ್ಲಿ ಗುರುವಾರ ವಿಶ್ವ ಹಿಂದು ಪರಿಷತ್ ಹಮ್ಮಿಕೊಂಡಿರುವ ಶೌರ್ಯ ಜಾಗರಣ ರಥ ಯಾತ್ರೆಯನ್ನು ಸ್ವಾಗತಿಸಿ ಅವರು ಮಾತನಾಡಿದರು. ‘ಪ್ರತಿ ಧರ್ಮವನ್ನೂ ಅವಲಂಬಿಸಿ ಈ ಜಗತ್ತಿನಲ್ಲಿ ಹಲವಾರು ದೇಶಗಳಿವೆ. ಆದರೆ, ಹಿಂದುಗಳಿಗೆ ಇರುವ ಏಕೈಕ ದೇಶವೆಂದರೆ ಅದು ಭಾರತ ಮಾತ್ರ. ಈ ದೇಶದ ಉಳಿವಿಗೆ ನಾವೆಲ್ಲರೂ ಕಂಕಣಬದ್ಧರಾಗಬೇಕು. ಹೀಗೆ ಬದ್ಧರಾಗಲು ನಮ್ಮಲ್ಲಿ ಶೌರ್ಯ ಬೇಕು. ಹನುಮಂತನ ಶೌರ್ಯ, ನಿಯತ್ತು, ನಿಷ್ಠೆ ಗುಣಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವ ಮೂಲಕ ನಾವು ಹಿಂದು ಧರ್ಮದ ಉಳಿವಿಗಾಗಿ ಪಣ ತೊಡಬೇಕಿದೆ. ಈ ಯಾತ್ರೆ ನಮಗೆಲ್ಲರಿಗೂ ಪ್ರೇರಣೆಯಾಗಲಿ’ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಮಾತನಾಡಿದರು. ಶ್ರೀವೀರಪ್ಪಜ್ಜನವರ ಮಠದಿಂದ ಹೊರಟ ರಥಯಾತ್ರೆ ಕೋಡಿಕೊಪ್ಪದ ಪ್ರಮುಖ ಬೀದಿಗಳಲ್ಲಿ ಸಾಗಿತು. ನಂತರ ನರೇಗಲ್ಲದ ಹಳೆ ಬಸ್ ನಿಲ್ದಾಣದಿಂದ ನರೇಗಲ್ಲದ ಪ್ರಮುಖ ಬೀದಿಗಳಲ್ಲಿ ಸಾಗಿತು.

ಮಂಜುನಾಥ ಹೆಗಡೆ, ರಘುನಾಥ ಕೊಂಡಿ, ಆನಂದ ಕುಲಕರ್ಣಿ, ವಿನೋದ ರಾಯಬಾಗಿ, ರಾಮು ನಿರಂಜನ, ರವಿ ಗೊರ್ಲಿ, ವೀರೇಶ ಬಿನ್ನಾಳಮಠ, ಪ್ರವೀಣ ಹೂಗಾರ, ಸತೀಶ ಕಮಲಾಪುರ, ರಾಜು ರಾಜಪುರೋಹಿತ, ಮಂಜು ಹರ್ತಿ, ಧರವಾ ವಡ್ಡಟ್ಟಿ, ಕಳಕಪ್ಪ ಬೆಡಗಲ್ಲ, ಶಿವಾನಂದ ಇಟಗಿ, ಚಂದ್ರು ಪೂಜಾರ, ಗಂಗಾಧರ ಮಡಿವಾಳರ, ಪ್ರಮೋದ ರಾಯಬಾಗಿ, ಶಿವು ಮುಳಗುಂದ, ಸುರೇಶ ರಾಯಬಾಗಿ, ಶಿವು ಸಂಗನಾಳ, ಮಲ್ಲಪ್ಪ ಕುಷ್ಟಗಿ, ಹನುಮಂತಸಾ ರಾಯಬಾಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net