ಭಾರತದ ವಿಜಯಕ್ಕಾಗಿ 20ರಿಂದ ಶತಚಂಡಿ ಯಜ್ಞ...

Sanatana 1
Published on

ರಾಷ್ಟ್ರೀಯ ವಕ್ತಾರ ಚೇತನ ರಾಜಹಂಸ ಮಾಹಿತಿ

ಗೋವಾದಲ್ಲಿ ಸನಾತನ ಸಂಸ್ಥೆಯಿಂದ ಶಂಖನಾದ ಮಹೋತ್ಸವ

ವಿಜಯವಾಣಿ ಸುದ್ದಿಜಾಲ ಉಡುಪಿ

ಭಾರತ-ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗಿದ್ದರೂ ದುಷ್ಟಬುದ್ಧಿಯ ಪಾಕಿಸ್ತಾನ ನಿಯಮ ಉಲ್ಲಂಘಿಸುತ್ತಲೇ ಇದೆ. ಹೀಗಾಗಿ ಯುದ್ಧದಲ್ಲಿ ಭಾರತಕ್ಕೆ ವಿಜಯ ದೊರೆಯಬೇಕೆಂದು ಸನಾತನ ಸಂಸ್ಥೆಯ ವತಿಯಿಂದ ಗೋವಾದಲ್ಲಿ ಮೇ 20ರಿಂದ 22ರ ವರೆಗೆ ಶತಚಂಡಿ ಯಜ್ಞ ಆಯೋಜಿಸಲಾಗಿದೆ ಎಂದು ಸಂಸ್ಥೆಯ ರಾಷ್ಟ್ರೀಯ ವಕ್ತಾರ ಚೇತನ ರಾಜಹಂಸ ಮಾಹಿತಿ ನೀಡಿದ್ದಾರೆ.

Sanatana 2
ಚೇತನ ರಾಜಹಂಸ

ಗೋವಾ ಪೋಂಡಾದ ಫಮಾರ್ಗುಡಿ ಎಂಬಲ್ಲಿರುವ ಇಂಜಿನಿಯರಿಂಗ್​ ಕಾಲೇಜ್​ ಮೈದಾನದಲ್ಲಿ 25 ಪುರೋಹಿತರ ಉಸ್ತುವಾರಿಯಲ್ಲಿ ಶತಚಂಡಿ ಯಜ್ಞ ನಡೆಯಲಿದೆ. ಎಲ್ಲ ನಾಗರಿಕರಿಗೂ ಕಾರ್ಯಕ್ರಮ ಮುಕ್ತವಾಗಿದ್ದು, ದೇಶ-ವಿದೇಶಗಳಿಂದಲೂ ಜನ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಂಖನಾದ ಮಹೋತ್ಸವ

ಮೇ 17ರಿಂದ 19ರ ವರೆಗೆ ಸನಾತನ ರಾಷ್ಟ್ರದ ಶಂಖನಾದ ಮಹೋತ್ಸವ ನಡೆಯಲಿದೆ. ಇದರಲ್ಲಿ 23 ದೇಶಗಳ ಪ್ರತಿಷ್ಠಿತ ಗಣ್ಯರು, ವಿವಿಧ ಸಂಪ್ರದಾಯದ ಸಂತ-ಮಹಾಂತರು, ವಿವಿಧ ರಾಜ್ಯದ ಮುಖ್ಯಮಂತ್ರಿಗಳು, ದೇವಸ್ಥಾನದ ಟ್ರಸ್ಟಿಗಳು, 25 ಸಾವಿರಕ್ಕೂ ಅಧಿಕ ಸಾಧಕರು, ಹಿಂದು ಧರ್ಮ ಪ್ರೇಮಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ರಕ್ಷಣೆಗಾಗಿ ಸಾಮೂಹಿಕ ಪ್ರಾರ್ಥನೆ

ಶಂಖನಾದ ಮಹೋತ್ಸವದ ಶತಚಂಡಿ ಯಜ್ಞದಲ್ಲಿ ಸಪ್ತಶತೀ ಸಾಮೂಹಿಕ ಪಾರಾಯಣ, ಯಜ್ಞ ವಿಧಿ, ಆಹುತಿ ಮತ್ತು ಪೂರ್ಣಾಹುತಿ ನಡೆಯಲಿದೆ. ಪೃಥ್ವಿಯಲ್ಲಿನ ಏಕೈಕ ಸನಾತನ ರಾಷ್ಟ್ರವಾದ ಭಾರತದ ರಕ್ಷಣೆಗಾಗಿ, ಯುದ್ಧದಲ್ಲಿ ಗೆಲುವಿಗಾಗಿ ಸಾಮೂಹಿಕ ಪ್ರಾರ್ಥನೆಯೂ ನೆರವೇರಲಿದೆ. ಯಜ್ಞದ ಮೊದಲು ನಡೆಯುವ ಶಂಖನಾದ ಮಹೋತ್ಸವದಲ್ಲಿ ರಾಷ್ಟ್ರಧರ್ಮ ಮತ್ತು ಹಿಂದು ಸಮಾಜ ರಕ್ಷಣೆ ಕುರಿತು ವಿಚಾರ ಮಂಥನ ನಡೆಯಲಿದೆ. ಮಾಹಿತಿಗಾಗಿ SanatanRashtraShankhnad.in ಜಾಲತಾಣ ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net