

ಉಪ್ಪಿನಂಗಡಿ: ಲೋಕಸಭಾ ಚುನಾವಣೆಯ ವೇಳೆ ಕ್ಯಾ.ಬ್ರಿಜೇಶ್ ಚೌಟರ ಗೆಲುವಿಗೆ ಸಂಕಲ್ಪಿಸಿದ್ದಂತೆ ಬಿಜೆಪಿ ಕಾರ್ಯಕರ್ತರಿಂದ
ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಶ್ರೀ ದೇವರಿಗೆ ಶತರುದ್ರಾಭಿಷೇಕ ಸೇವೆ ನಡೆಯಿತು.
ಉಪ್ಪಿನಂಗಡಿ ಬಿಜೆಪಿ ಮಹಾಶಕ್ತಿ ಕೇಂದ್ರ ಹಾಗೂ ಕಣಿಯೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಆಶಯದಲ್ಲಿ, ಕ್ಯಾ.ಬ್ರಿಜೇಶ್ ಚೌಟ ಉಪಸ್ಥಿತಿಯಲ್ಲಿ ಸೇವೆ ನಡೆಯಿತು.
ರೂವಾರಿ ಕರುಣಾಕರ ಸುವರ್ಣ, ಮುಖಂಡರಾದ ಸಂಜೀವ ಮಠಂದೂರು, ದಯಾನಂದ ಉಜಿರೆಮಾರ್, ಸುನೀಲ್ ಕುಮಾರ್ ದಡ್ಡು, ಶಿವಕುಮಾರ್ ಕಳ್ಳಿಮಾರ್, ಸಾಜ ರಾಧಾಕೃಷ್ಣ ಆಳ್ವ, ಚಂದ್ರಶೇಖರ್ ರಾವ್ ಬಪ್ಪಳಿಕೆ, ಚನಿಲ ತಿಮ್ಮಪ್ಪ ಶೆಟ್ಟಿ, ಬಾಲಕೃಷ್ಣ ಮುಗೇರೋಡಿ, ಉಷಾ ಮುಳಿಯ, ಉಮೇಶ್ ಕೋಡಿಬೈಲು, ಅನಿಲ್ ತೆಂಕಿಲ, ಯತೀಂದ್ರ ಕೊಚ್ಚಿ, ವಿದ್ಯಾಧರ ಜೈನ್, ಸುರೇಶ್ ಅತ್ರಮಜಲು, ಮೋಹನ್ ಪಕ್ಕಳ, ರಾಮಚಂದ್ರ ಮಣಿಯಾಣಿ, ಕಂಗ್ವೆ ವಿಶ್ವನಾಥ ಶೆಟ್ಟಿ, ಪ್ರಸನ್ನ ಮಾರ್ಥ, ಸುಧಾಕರ ಶೆಟ್ಟಿ, ಎನ್. ಉಮೇಶ್ ಶೆಣೈ, ಆದೇಶ ಶೆಟ್ಟಿ, ಸುದರ್ಶನ, ರವಿಂದ್ರ ಆಚಾರ್ಯ, ತಿಮ್ಮಪ್ಪ ಗೌಡ, ಸುನೀಲ್ ಅನಾವು, ಧನಂಜಯ್ ನಟ್ಟಿಬೈಲು, ಶೋಭಾ ದಯಾನಂದ, ರಾಧಾ ಯು., ಶ್ಯಾಮಲಾ ಶೆಣೈ, ಪುರುಷೋತ್ತಮ ಮುಂಗ್ಲಿಮನೆ, ಹರೀಶ್ ನಟ್ಟಿಬೈಲ್, ಪ್ರಸಾದ್ ಭಂಡಾರಿ, ದಯಾನಂದ ಸರೋಳಿ, ವಸಂತ ಪಿಜಕ್ಕಳ, ಸುಬ್ರಹ್ಮಣ್ಯ ಅಗರ್ತ, ಬಾಲಕೃಷ್ಣ ಗೌಡ, ಪ್ರಶಾಂತ್ ನೆಕ್ಕಿಲಾಡಿ, ಲಕ್ಷ್ಮಣ್ ಬೆಳ್ಳಿಪ್ಪಾಡಿ, ಗಂಗಾಧರ ಬಿ.ಎಸ್., ಹರಿರಾಮಚಂದ್ರ ಮೊದಲಾದವರು ಭಾಗವಹಿಸಿದ್ದರು.
ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಳ, ದೇವಳದ ಆಡಳಿತ ಮಂಡಳಿ ಅಧ್ಯಕ್ಷ ರಾಧಾಕೃಷ್ಣ ನಾಯಕ್, ದೇವಿದಾಸ್ ರೈ, ಅರ್ತಿಲ ಕೃಷ್ಣ ರಾವ್, ವೆಂಕಪ್ಪ ಪೂಜಾರಿ, ಡಾ.ರಮ್ಯಾ ರಾಜಾರಾಮ್, ಕಾರ್ಯನಿರ್ವಹಣಾಧಿಕಾರಿ ಚೆನ್ನಪ್ಪ ಗೌಡ ಸಂಸದರನ್ನು ಶ್ರೀ ಕ್ಷೇತ್ರದ ವತಿಯಿಂದ ಸ್ವಾಗತಿಸಿ ಪ್ರಾರ್ಥನೆ ಸಲ್ಲಿಸಿದರು. ದೇವಳದ ವ್ಯವಸ್ಥಾಪಕ ವೆಂಕಟೇಶ್ ರಾವ್, ಪದ್ಮನಾಭ ಕುಲಾಲ್ ಸಹಕರಿಸಿದರು.