ಕುಂದೇಶ್ವರ ಸನ್ನಿಧಿಯಲ್ಲಿ ಶತರುದ್ರಾಭಿಷೇಕ

gan
Published on

ಕುಂದಾಪುರ: ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ಶತರುದ್ರಾಭಿಷೇಕ, ಮಹಾಪೂಜೆ, ಅಖಂಡ ಭಜನೆ ಕಾರ್ಯಕ್ರಮ ನಡೆಯಿತು. ಸಂಜೆ ಯಶಸ್ವಿ ಕಲಾಕೇಂದ್ರದ ಮಕ್ಕಳಿಂದ ಯಕ್ಷಗಾನ ಬಯಲಾಟ, ನೃತ್ಯವಸಂತ ನಾಟ್ಯಾಲಯದ ಕಲಾವಿದೆಯರಿಂದ ನೃತ್ಯಸಿಂಚನ, ಕುಂದೇಶ್ವರ ಸನ್ನಿಧಿಯಲ್ಲಿ ರಂಗಪೂಜೆ, ಮಹಾಮಂಗಳಾರತಿ ನಡೆಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಾಸುದೇವ ಯಡಿಯಾಳ್, ಸದಸ್ಯರಾದ ಕೆ.ಸತೀಶ ಗಾಣಿಗ, ಜಿ.ಎಸ್. ಭಟ್, ಕೆ.ನಾಗರಾಜ ನಾಯ್ಕ, ವಿಠಲ ಕಾಂಚನ್, ದಿನೇಶ್, ಗಿರಿಜಾ ಉದಯ ಹವಾಲ್ದಾರ್, ಸೀಮಾ ಚಂದ್ರ ಪೂಜಾರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net