ಬೆಣ್ಣೆಗದ್ದೆಯಲ್ಲಿ ಶತಚಂಡಿ, ಮಹಾರುದ್ರ 23ರಿಂದ

Published on

ಶಿರಸಿ: ಗುರುಕುಲ ವಿದ್ಯಾಪೀಠ ಟ್ರಸ್ಟ್,ರಾಮೊಕೋ ಗೋಸೇವಾ ಧಾಮ ಬೆಣ್ಣೆಗದ್ದೆ ಅವರಿಂದ ಲೋಕ ಕಲ್ಯಾಣಾರ್ಥವಾಗಿ ಶತಚಂಡಿ ಮತ್ತು ಮಹಾರುದ್ರವು ಫೆ. 23ರಿಂದ 26 ರವರೆಗೆ ತಾಲೂಕಿನ ಬೆಣ್ಣೆಗದ್ದೆಯಲ್ಲಿ ನಡೆಯಲಿದೆ.

ಫೆ. 23ರಂದು ಗಣಪತಿ ಹೋಮ, 24 ರಂದು ಶತಚಂಡಿ, ಸಹಸ್ರ ಸುವಾಸಿನೀ ಸಮಾರಾಧನೆ ನಡೆಯಲಿದೆ. ಚಿನ್ಮಯ ಮಿಶನ್ ಮುಖ್ಯಸ್ಥ ಕೃತಾತ್ಮನಂದರು ಆಗಮಿಸಲಿದ್ದಾರೆ.

ಫೆ. 25ರಂದು ಮಹಾರುದ್ರ ಹವನ ನಡೆಯಲಿದೆ. ಸೋಂದಾ ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

26 ಮಹಾಶಿವರಾತ್ರಿಯಂದು 24 ತಾಸು ಅಖಂಡ ಶಿವಪೂಜೆ, ಅನೇಕ ಭಜನಾ ಮಂಡಳಿಗಳಿಂದ ಭಜನೆ, ಭರತನಾಟ್ಯ, ಧೀಮಹಿ ಯಕ್ಷಕಲಾಬಳಗದಿಂದ ‘ಭೂಕೈಲಾಸ’ ಯಕ್ಷಗಾನ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಂಸ್ಥೆಯ ಮುಖ್ಯಸ್ಥ ನಾರಾಯಣ ಭಟ್ಟ ಬೆಣ್ಣೆಗದ್ದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net