ಮಾ.1ರಿಂದ ಪೊಳಲಿಯಲ್ಲಿ ಶತ ಚಂಡಿಕಾಯಾಗ

rajesh naik
Published on

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥ, ಸಾನಿಧ್ಯ ಅಭಿವೃದ್ಧಿಗಾಗಿ ಶತ ಚಂಡಿಕಾಯಾಗ ಸೇವಾ ರೂಪದಲ್ಲಿ ದೊಡ್ಡ ರಂಗಪೂಜೆ ಉತ್ಸವ ಮಾ.1ರಿಂದ ಆರಂಭಗೊಂಡು ಮಾ.7ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಬ್ರಹ್ಮಶ್ರೀ ಪೊಳಲಿ ಶ್ರೀ ಕೃಷ್ಣ ತಂತ್ರಿ ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನೈಾಕ್ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿ, ಮಾ.1ರಂದು ಬೆಳಗ್ಗೆ 8ರಿಂದ ಸಾಮೂಹಿಕ ಪ್ರಾರ್ಥನೆ, ಗಣಪತಿ ಹೋಮ, ಸಪ್ತಸತಿ ಪಾರಾಯಣ ಆರಂಭ, ನವಾಕ್ಷರೀ ಜಪ. 2ರಂದು ಬೆಳಗ್ಗೆ 7.30ರಿಂದ ಪಾರಾಯಣ, ನವಾಕ್ಷರೀ ಜಪ, ಮೃತ್ಯುಂಜಯ ಹೋಮ, ಸುಬ್ರಹ್ಮಣ್ಯ ಸಹಸ್ರನಾಮ ಹೋಮ, ಸಂಜೆ 3.30ರಿಂದ ಶ್ರೀಚಕ್ರ ಪೂಜೆ ನಡೆಯಲಿದೆ.

3ರಂದು ಬೆಳಗ್ಗೆ 7.30ರಿಂದ ಪಾರಾಯಣ, ನವಾಕ್ಷರೀ ಜಪ, ನವಗ್ರಹ ಹೋಮ, 4ರಂದು ಬೆಳಗ್ಗೆ 7.30ರಿಂದ, ಕಾಳಿ ಸಹಸ್ರನಾಮ ಹೋಮ, ಸಪ್ತಸತಿ ಪಾರಾಯಣ ಆರಂಭ, ನವಾಕ್ಷರೀ ಜಪ, ಸಂಜೆ 4ರಿಂದ ಮಂಟಪ ಸಂಸ್ಕಾರ, ಪ್ರಾಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಪೂಜೆ, ಅಗ್ನಿ ಜನನ ಸಂಸ್ಕಾರ ನಡೆಯಲಿದೆ.

5ರಂದು ಬೆಳಗ್ಗೆ 6ರಿಂದ ಶತ ಚಂಡಿಕಾಯಾಗ ಆರಂಭ, 10.30ಕ್ಕೆ ಹೋಮಪೂಜೆ, ಪೂರ್ಣಾಹುತಿ, 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪಲ್ಲಪೂಜೆ, ಅನ್ನಸಂತರ್ಪಣೆ ನಡೆಯಲಿದೆ.

ದೊಡ್ಡ ರಂಗಪೂಜೆ ಉತ್ಸವ

ಮಾ.6ರಂದು ದೊಡ್ಡ ರಂಗಪೂಜೆ ಉತ್ಸವ ನಡೆಯಲಿದ್ದು, ಬೆಳಗ್ಗೆ 7.30ರಿಂದ ಗಣಪತಿ ಹೋಮ, ಕಲಶಪೂಜೆ, ಪ್ರಧಾನಹೋಮ, ಕಲಶಾಭಿಷೇಕ, ಮಹಾಪೂಜೆ ಅನ್ನಸಂತರ್ಪಣೆ, 6.30ಕ್ಕೆ ಮಹಾಪೂಜೆ, 7.30ಕ್ಕೆ ದೊಡ್ಡ ರಂಗಪೂಜೆ, 8.30ರಿಂದ ಬಲಿ ಉತ್ಸವ, ಬೆಳ್ಳಿ ರಥೋತ್ಸವ, ಚಂದ್ರಮಂಡಲ ರಥ, ಸಣ್ಣ ರಥೋತ್ಸವ, ಪಲ್ಲಕ್ಕಿ ಉತ್ಸವ ನಡೆಯಲಿದೆ. ಮಾ.7ರಂದು ಬೆಳಗ್ಗೆ 7.30ರಿಂದ ಕಲಶಪೂಜೆ, ಗಣಪತಿ ಹೋಮ, ಪ್ರಧಾನ ಹೋಮ, ಸಂಪ್ರೋಕ್ಷಣೆ, ಮಂತ್ರಾಕ್ಷತೆ ನಡೆಯಲಿದೆ.

ಶತ ಚಂಡಿಕಾಯಾಗದ ಪೂರ್ವಸಿದ್ಧತೆ ಸಭೆ ಫೆ .2, ಫೆ.11ರಂದು ನಡೆಸಲಾಗಿದೆ. 9ರಂದು ಸೀಮೆಗೆ ಸಂಬಂಧಪಟ್ಟ ಗ್ರಾಮದಲ್ಲಿ ಸಭೆ ನಡೆದಿದೆ. ಶತ ಚಂಡಿಕಾಯಾಗ, ದೊಡ್ಡ ರಂಗಪೂಜೆಗೆ ಬರುವ ಭಕ್ತರ ಅನುಕೂಲಕ್ಕಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ. ಶತ ಚಂಡಿಕಾಯಾಗಕ್ಕೆ 25 ಸಾವಿರ ಭಕ್ತರು, ದೊಡ್ಡ ರಂಗಪೂಜೆಗೆ 25 ಸಾವಿರ ಭಕ್ತರು ಬರುವ ನಿರೀಕ್ಷೆಯಿದ್ದು, ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗುವುದು. ಜತೆಗೆ ಬೆಳಗಿನ ಉಪಹಾರದ ವ್ಯವಸ್ಥೆ ಮಾಡಲಾಗುವುದು. ದೇವರ ದರ್ಶನಕ್ಕೆ ಸರದಿ ಸಾಲಿನಲ್ಲಿ ಹೋಗಲು ವ್ಯವಸ್ಥೆ ಮಾಡಲಾಗುವುದು. ಕಾರ್ಯಕ್ರಮದ ಯಶಸ್ವಿಗಾಗಿ ಸಂಘ-ಸಂಸ್ಥೆಗಳ ಸ್ವಯಂಸೇವಕರು ತಂಡದ ಹೆಸರು ನೋಂದಾಯಿಸುತ್ತಿದ್ದಾರೆ. ರಾಜೇಶ್ ನೈಾಕ್, ಬಂಟ್ವಾಳ ಶಾಸಕ https://www.vijayavani.net/prakatane-2 https://www.vijayavani.net/mangalore-daivajna-state-level-cricket-tournament-end

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net