ಷಷ್ಠಿಪೂರ್ತಿ ಸಮಾರಂಭ

h26-vhp
Published on

ಹುಬ್ಬಳ್ಳಿ: ವಿಶ್ವ ಹಿಂದು ಪರಿಷತ್ ಹುಬ್ಬಳ್ಳಿ ಮಹಾನಗರದ ಅಶೋಕನಗರ ಪ್ರಖಂಡ ಸ್ಥಾಪನಾದಿನ ಮತ್ತು ಷಷ್ಠಿಪೂರ್ತಿ ಸಮಾರಂಭವನ್ನು ಇತ್ತೀಚೆಗೆ ನಗರದಲ್ಲಿ ಏರ್ಪಡಿಸಲಾಗಿತ್ತು. ರಾಯನಾಳದ ಶ್ರೀ ಅಭಿನವ ರೇವಣಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಅತಿಥಿಗಳಾಗಿ ವೆಂಕಟೇಶ ಪೂಜಾರ, ಮುಖ್ಯವಕ್ತಾರ ರಘು ಯಲ್ಲಕನವರ ಬೌದ್ಧಿಕ ನಡೆಸಿಕೊಟ್ಟರು.
ವಿಎಚ್‌ಪಿಯ ರಮೇಶ ಕದಂ, ಚೇತನ ರಾವ್, ಕೇಶವ ಬಾದನಟ್ಟಿ, ಅರುಣ ಪ್ರಭು, ಸತೀಶ ಜೋಶಿ, ಸುನಿಲ ಕಟ್ಟಿಮನಿ, ಅಮಿತ ಶೇಟ್, ಶಂಕರ ಕಮತರ, ಆಕಾಶ ಭಂಡಾರಿ, ಮೃತ್ಯುಂಜಯ ದೊಡ್ಡಮನಿ, ಅಶೋಕ ಹಳ್ಯಾಳ, ಡಾ. ಸಂದೀಪ ಕುಲಕರ್ಣಿ, ಮಂಜುನಾಥ ಜಟ್ಟಪ್ಪನವರ, ರಂಗಾ ಬದ್ದಿ, ರಮೇಶ ಮಹಾದೇವಪ್ಪನವರ, ಧನ್ಯೋಸ್ಮಿ ಯೋಗ ಕೇಂದ್ರ ಹಾಗೂ ಸುತ್ತಲಿನ ಬಡಾವಣೆಯ ಮಾತೆಯರು, ಹಿರಿಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net