ವಿಶೇಷ ಪೂಜಾ ಮಹೋತ್ಸವ

hnp d18
Published on

ಹೊಳೆನರಸೀಪುರ: ಪಟ್ಟಣದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಸುಬ್ರಮಣ್ಯಸ್ವಾಮಿ ಸನ್ನಿಧಿಯಲ್ಲಿ ಷಷ್ಠಿ ಪ್ರಯುಕ್ತ ಸೋಮವಾರ ವಿಶೇಷ ಪೂಜಾ ಮಹೋತ್ಸವ ವೈಭವದಿಂದ ಜರುಗಿತು. ಶತಭಿಷಾ ನಕ್ಷತ್ರದಲ್ಲಿ ಶ್ರೀವಲ್ಲಿ ಸಮೇತ ಸುಬ್ರಮಣ್ಯ ಸ್ವಾಮಿ ಮೂರ್ತಿಗೆ ಸಂಪ್ರದಾಯದಂತೆ ಭಿಷೇಕ, ಪಂಚಾಮೃತ, ಪಂಚಫಲ ಅಭಿಷೇಕ ವಿವಿಧ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಿ ವೇದ ಪಾರಾಯಣ, ಸ್ತೋತ್ರಪಾಠ ಸಹಿತ ಪೂಜಾ ವಿಧಿ ವಿಧಾನ ನೆರವೇರಿಸಲಾಯಿತು. ಸ್ವಾಮಿಯ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿದ್ದ ರಥದಲ್ಲಿ ಪ್ರತಿಷ್ಠಾಪಿಸಿ ಪೂಜಾ ಕೈಂಕರ್ಯ ನೆರವೇರಿಸಿದ ನಂತರ ದೇವಾಲಯದ ಪ್ರಾಂಗಣದಲ್ಲಿ ಪ್ರಾಕಾರೋತ್ಸವ ನಡೆಸಲಾಯಿತು. ಹಿರಿಯ ಅರ್ಚಕ ರಾಮಸ್ವಾಮಿಭಟ್ಟರ್ ನೇತೃತ್ವದಲ್ಲಿ ವೆಂಕಟ ನರಸಿಂಹನ್, ನಾರಾಯಣ ಹಾಗೂ ರಾಮಪ್ರಸನ್ನ ಇತರರು ಪೂಜಾ ಕಾರ್ಯದಲ್ಲಿ ಸಹಕರಿಸಿದರು. ಶಾಸಕ ಎಚ್.ಡಿ.ರೇವಣ್ಣ, ಬಿಜೆಪಿ ಮುಖಂಡರಾದ ಮಾಯಣ್ಣ, ಯು.ಕೆ.ವನಿತಾ, ಎಂ.ವೀಕ್ಷಿತ್, ಎಂ.ಮೋಕ್ಷ, ವಕೀಲ ಶಿವಮೂರ್ತಿ ಇತರರು ಇದ್ದರು.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net