ಗ್ರಾಮೀಣ ಪ್ರದೇಶಗಳಲ್ಲಿ ಷಷ್ಠಿ ಪೂಜೆ

Shashti
Published on

ಕುಶಾಲನಗರ:

ಕುಶಾಲನಗರ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲೂ ಷಷ್ಠಿ ಆಚರಣೆ ಶನಿವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಕಾವೇರಿ ನದಿ ದಂಡೆಯ ಕಣಿವೆ, ಹಕ್ಕೆ, ಹುಲುಸೆ, ಹೆಬ್ಬಾಲೆ ಮೊದಲಾದ ಗ್ರಾಮಗಳ ಮಹಿಳೆಯರು ಬೆಳಗೆ ಬೇಗ ಎದ್ದು, ಮನೆಯಂಗಳ ಶುಚಿಗೊಳಿಸಿ, ರಂಗೋಲಿ ಹಚ್ಚಿ, ಸ್ಥಳೀಯವಾಗಿ ಇರುವಂಥ ಹುತ್ತಗಳನ್ನು ಪೂಜಿಸಿ ಪುನೀತರಾದರು.

ಹಕ್ಕೆ ಗ್ರಾಮದ ಗೃಹಿಣಿ ಮಂಜುಳಾ ಮತ್ತು ಉದ್ಯಮಿ ಕುಮಾರ್ ದಂಪತಿ ರಾಜ್ಯ ಹೆದ್ದಾರಿಯಲ್ಲಿನ ಹುತ್ತವೊಂದನ್ನು ಪೂಜಿಸಿ ಇಷ್ಟಾರ್ಥಗಳನ್ನು ಸಿದ್ದಿಸುವಂತೆ ಬೇಡಿಕೊಂಡರು.

ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಪರಸ್ಪರ ತರಕಾರಿ, ಕಾಯಿಪಲ್ಯೆಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಮನೆಗಳಲ್ಲಿ ಕಿಚಿಡಿ ತಯಾರಿಸಿ ದೇವರಿಗೆ ನೈವೇದ್ಯ ಇಟ್ಟು ಪ್ರಸಾದದ ಸ್ವರೂಪ ಕೊಟ್ಟು ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net