ಕುದ್ರೆಪಾಯ ಉಪ ಸಮಿತಿಗೆ ಶಶಿಕಾಂತ್ ಅಧ್ಯಕ್ಷ

SHASHIKANTH K.J
Published on

ಮಡಿಕೇರಿ: ಕೊಡಗು ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ಕುದ್ರೆಪಾಯ ಗ್ರಾಮ ಮಟ್ಟದ ಉಪ ಸಮಿತಿಯನ್ನು ರಚಿಸಲಾಗಿದ್ದು, ನೂತನ ಅಧ್ಯಕ್ಷರಾಗಿ ಕೆ.ಜೆ.ಶಶಿಕಾಂತ್ ಹಾಗೂ ಕಾರ್ಯದರ್ಶಿಯಾಗಿ ಪಿ.ಆರ್.ಸತೀಶ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮರಾಠ, ಮರಾಟಿ ಸಮಾಜ ಸೇವಾ ಸಂಘದ ಕುದ್ರೆಪಾಯ ಗ್ರಾಮ ಮಟ್ಟದ ಸಭೆ ಸಂಘದ ಜಿಲ್ಲಾಧ್ಯಕ್ಷ ಎಂ.ಎಂ.ಪರಮೇಶ್ವರ ಅವರ ಅಧ್ಯಕ್ಷತೆಯಲ್ಲಿ ಶ್ರೀ ಮಹಾವಿ? ದೈವಸ್ಥಾನದ ಆವರಣದಲ್ಲಿ ನಡೆಯಿತು.

ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಪಿ.ಎಂ.ಯಶೋಧ, ಉಪ ಕಾರ್ಯದರ್ಶಿಯಾಗಿ ವಿ.ಆರ್.ಪ್ರವೀಣ, ಕೋಶಾಧಿಕಾರಿಯಾಗಿ ಕೆ.ಎಂ.ರಂಜಿತ್ ಸಂಚಾಲಕರಾಗಿ ಟಿ.ವಿಷ್ಣು ನಾಯ್ಕ್, ಭಾರತಿ, ಸರಸ್ವತಿ ಮಾಪ್ಲೆಕಜೆ, ಸಲಹೆಗಾರರಾಗಿ ಕೆ.ಸಿ.ವಸಂತ, ಸಮಿತಿ ಸದಸ್ಯರಾಗಿ ಸತೀಶ್, ವಿ.ಸಿ.ರಾಜೇಶ್ವರ, ಕುಶಾಲಪ್ಪ ಬಳ್ಳಿಕೋಡಿ, ವಿಶ್ವನಾಥ ಚಳ್ಳಂಗಾಯ, ಹೂವಯ್ಯ ಕೆರೆಮೂಲೆ ಅವಿರೋಧವಾಗಿ ಆಯ್ಕೆಯಾದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಎಂ.ಎಂ.ಪರಮೇಶ್ವರ ಅವರು ನೂತನ ಪದಾಧಿಕಾರಿಗಳು ಸಂಘಟಿತರಾಗಿ ಸಮಾಜದ ಅಭ್ಯುದಯಕ್ಕಾಗಿ ಶ್ರಮಿಸಬೇಕು ಮತ್ತು ಸಂಘವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಬೇಕು. ಪ್ರತಿ ತಿಂಗಳು ಮಾಸಿಕ ಸಭೆಯನ್ನು ನಡೆಸಬೇಕು, ಯಾವುದೇ ವಿಚಾರಗಳನ್ನು ಜಿಲ್ಲಾ ಸಂಘದ ಮಾಸಿಕ ಸಭೆಯಲ್ಲಿ ಚರ್ಚಿಸಿ ಕ್ರಮ ತೆಗೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಗ್ರಾಮದಲ್ಲಿ ಮದ್ಯಪಾನ ನಿಷೇಧಕ್ಕೆ ಗ್ರಾಮಸ್ಥರು ಹಾಗೂ ಮಹಿಳೆಯರು ಪಣತೊಟ್ಟು ಜಾಗೃತಿ ಮೂಡಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ ಜೀವನದ ಪಾಠವನ್ನು ಕೂಡ ಹೇಳಿಕೊಡಬೇಕು ಎಂದು ಕಿವಿಮಾತು ಹೇಳಿದರು.

ಸಂಚಾಲಕ ಟಿ.ವಿಷ್ಣು ನಾಯ್ಕ್ ಮಾತನಾಡಿ, ಜಾತಿ ಪ್ರಮಾಣ ಪತ್ರ ನೀಡುವ ಸಂದರ್ಭ ಮರಾಟಿ(ದ.ಕ) ಎಂದು ನೀಡುವುದರಿಂದ ಸರ್ಕಾರದ ಸೌಲಭ್ಯದಿಂದ ನಾವು ವಂಚನೆಗೊಳಗಾಗುತ್ತೇವೆ. ಆದ್ದರಿಂದ ಇದನ್ನು ಸರಿ ಪಡಿಸಿಕೊಳ್ಳಬೇಕಾಗಿದೆ ಎಂದು ಸಭೆಯ ಗಮನ ಸೆಳೆದರು. ಆಟಿ ೧೮ರ ಪ್ರಯುಕ್ತ ಆಟಿ ಪಾಯಸ ಮತ್ತು ಖಾದ್ಯವನ್ನು ಸವಿಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net