ಹರಕೆ ಫಲಿಸಿದ್ದಕ್ಕೆ ತೆಲಂಗಾಣದಿಂದ ಕರ್ನಾಟಕದವರೆಗೆ ಉರುಳುಸೇವೆ!

shashikala
Published on

ಬೀದರ್: ಇಡೀ ಪ್ರಪಂಚದಾದ್ಯಂತ ಜನ ಕರೋನಾ ಮಹಾಮಾರಿ ಕಳೆದ ಎರಡು ವಷರ್ಗಳ ಹಿಂದೆ ಅಲೆಗಳ ರೂಪದಲ್ಲಿ ಬಂದು ಜನರ ಬದುಕನ್ನು ಅಸ್ತವ್ಯಸ್ತ ಮಾಡಿತ್ತು. ಎಷ್ಟೋ ಜೀವಗಳನ್ನು ಬಲಿ ಪಡೆದಿತ್ತು. ಆಗ ಜನರು ವಿವಿಧ ಹರಕೆಗಳ ಮೊರೆ ಹೋಗಿದ್ದು, ಇದೆ. ಹೀಗೆ ಕರೋನಾ ಮುಕ್ತವಾದರೆ ತೆಲಂಗಾಣದಿಂದ ಕರ್ನಾಟಕದವರೆಗೆ ಉರುಳು ಸೇವೆ ಮಾಡುವುದಾಗಿ ತಾಯಿಯೊಬ್ಬರು ಹೊತ್ತ ಹರಕೆ ಇದೀಗ ನೆರವೇರಿದೆ.

ಶಶಿಕಲಾ ಮಾತೆ ಎಂಬುವವರು ಜನ ನೆಮ್ಮದಿಯಿಂದ ಬದುಕುವಂತಾದರೆ ಉರುಳು ಸೇವೆ ಮಾಡುವುದಾಗಿ ಭಾಗ್ಯವಂತಿ ದೇವಿಗೆ ಬೇಡಿಕೊಂಡಿದ್ದರು. ತಮ್ಮ ಬೇಡಿಕೆ ಫಲಿಸಿದ ಹಿನ್ನೆಲೆಯಲ್ಲಿ ಶಶಿಕಲಾ ಮಾತೆ ತೆಲಂಗಾಣದಿಂದ ಕಲಬುರಗಿಯ ಭಾಗ್ಯವಂತಿ ದೇವಿ ದೇವಾಲಯಕ್ಕೆ ಉರುಳು ಸೇವೆ ಮೂಲಕ ತೆರಳಿ ತಮ್ಮ ಹರಕೆಯನ್ನು ಈಡೇರಿಸುತ್ತಿದ್ದಾರೆ. ಇವರ ಉರುಳು ಸೇವೆಯು ರಾಷ್ಟ್ರೀಯ ಹೆದ್ದಾರಿ 09 ರಲ್ಲಿ ನಡೆಯುತ್ತಿದ್ದು, ಇವರೊಂದಿಗೆ ಅನೇಕ ಭಕ್ತರು ಒಟ್ಟಿಗೆ ಹೆಜ್ಜೆ ಹಾಕಿದ್ದಾರೆ.

ಒಟ್ಟು ತೆಲಂಗಾಣದಿಂದ ಕರ್ನಾಟಕದ ವರೆಗೆ 300 ಕಿ.ಮೀ.ವರೆಗೆ ಲೋಕ ಕಲ್ಯಾಣಕ್ಕಾಗಿ ಉರುಳು ಸೇವೆ ಮಾಡುತ್ತಿರುವ ಈ ತಾಯಿಯ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net