ಶ್ರಮ ಜೀವಿಗಳ ರತ್ನ ಪ್ರದಾನ 30ರಂದು

Published on

ಹುಬ್ಬಳ್ಳಿ: ಸಾಹಿತಿ, ಕವಿ, ಶ್ರಮಜೀವಿಗಳ ನಾಯಕ ಪ್ರೊ. ಕೆ.ಎಸ್. ಶರ್ಮಾ ಅವರ 92ನೇ ಜನ್ಮದಿನ ಅಂಗವಾಗಿ ಭಾರತ ಏಕತಾ ಆಂದೋಲನ ವತಿಯಿಂದ ನಗರದ ಗೋಕುಲ ರಸ್ತೆ ವಿಶ್ವಶ್ರಮ ಚೇತನ ಕ್ಯಾಂಪಸ್ ನಲ್ಲಿ ಸೆ. 30ರಂದು ಬೆಳಗ್ಗೆ 11.30ಕ್ಕೆ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಭಾರತ ಏಕತಾ ಆಂದೋಲನ ಮತ್ತು ಬಸವ ಶಾಂತಿ ಮಿಶನ್ ಸಂಯುಕ್ತ ಸಂಘಟನೆಗಳ ಪರವಾಗಿ ಪ್ರೊ. ಶರ್ಮಾ ಅವರಿಗೆ ಶ್ರಮ ಜೀವಿಗಳ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಆಂದೋಲನ ಕಾರ್ಯಾಧ್ಯಕ್ಷ ಮಹಾದೇವ ಹೊರಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net