ಹಂಚಿನಾಳ ಗ್ರಾಮಸ್ಥರ ಪ್ರೋತ್ಸಾಹ ದೊಡ್ಡದು

3
ಹಂಚಿನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಜರುಗಿತು. ಆರ್.ಆರ್.ಝಿರ್ಲಿ, ಬಂಡು ಕೊಂಕಣಿ, ಎಚ್.ಬಿ.ಭಜಂತ್ರಿ, ಮಲ್ಲಪ್ಪ ಮುಗಳಿ, ದಿವ್ಯಾ ಕುರಣಿ ಇತರರಿದ್ದರು.
Published on

ಹಂಚಿನಾಳ: ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ 2023-24ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 8 ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಗುರುವಾರ ಜರುಗಿತು.

ಸಮೂಹ ಸಂಪನ್ಮೂಲ ವ್ಯಕ್ತಿ ಆರ್.ಆರ್.ಝಿರ್ಲಿ ಮಾತನಾಡಿ, ಶಾಲೆಗೆ ಹಂಚಿನಾಳ ಗ್ರಾಮದ ಶಿಕ್ಷಣ ಪ್ರೇಮಿಗಳು ಸಹಾಯ ಹಸ್ತ ಚಾಚುತ್ತ ಮುದ್ದು ಮಕ್ಕಳನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಹೇಳಿದರು. ಶಿಕ್ಷಕ ಬಂಡು ಕೊಂಕಣಿ ಮಾತನಾಡಿ, ಬಡವನಾಗಿ ಹುಟ್ಟುವುದು ನಮ್ಮ ತಪ್ಪಲ್ಲ. ಆದರೆ, ಬಡವನಾಗಿಯೇ ಸಾಯುವುದು ನಮ್ಮ ತಪ್ಪು. ಹಾಗಾಗಿ, ಎಲ್ಲ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಅತ್ಯುನ್ನತ ಸ್ಥಾನ ಅಲಂಕರಿಸಬೇಕು ಎಂದರು.

ಮುಖ್ಯೋಪಾಧ್ಯಾಯ ಎಚ್.ಬಿ.ಭಜಂತ್ರಿ ಅತಿಥಿಗಳೊಂದಿಗೆ ಶಾರದಾಂಬೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ವಿದ್ಯಾರ್ಥಿಗಳಾದ ಶಿವಾನಂದ ತಳವಾರ ಹಾಗೂ ಮಲ್ಲಿಕಾರ್ಜುನ ಗುಂಡಿ ನಿರೂಪಿಸಿದರು. ದಿವ್ಯಾ ಕುರಣಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಕೆ.ಎ.ನೌಕುಡಿ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ಪೂಜಾ ಪಾಟೀಲ ವಂದಿಸಿದರು. ಮುಖಂಡ ಮಲ್ಲಪ್ಪ ಮುಗಳಿ ಹಾಗೂ ಸಹಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಪಾಲಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net