ಶಿಶುನಾಳ ಶರೀಫ್ ನಮಗೆ ಆದರ್ಶವಾಗಲಿ - ಶಿವಪುತ್ರ ಶಾಸ್ತ್ರಿ

0101
Published on

ಐಗಳಿ: ಸಂತ ಶಿಶುನಾಳ ಶರೀಫ್‌ಅವರಂಥ ಮಹಾತ್ಮರ ನಡೆ-ನುಡಿ ನಮಗೆ ದಾರಿ ದೀಪವಾಗಲಿ ಎಂದು ಅರಟಾಳ ಸಿದ್ಧಾರೂಢ ಆಶ್ರಮದ ಶಿವಪುತ್ರ ಶಾಸ್ತ್ರಿ ಹೇಳಿದ್ದಾರೆ.

ಸ್ಥಳೀಯ ರುದ್ರಪಶುಪತಿ ಸ್ವಾಮೀಜಿ ಮಠದಲ್ಲಿ ಬುಧವಾರ ಶ್ರಾವಣ ಮಾಸದ ನಿಮಿತ್ತ ಏರ್ಪಡಿಸಿದ್ದ ಶಿವಾನುಭವ ಗೋಷ್ಠಿಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಪವಿತ್ರ ಶ್ರಾವಣ ಮಾಸದಲ್ಲಿ ಮಹಾನ್ ಸಂತ, ಶರಣರ ನಡೆ-ನುಡಿ ಹಾಗೂ ಜೀವನ ಚರಿತ್ರೆ ಸ್ಮರಿಸಿ ಅನುಸರಿಸಿದರೆ ಆನಂದಮಯ ಜೀವನ ನಮ್ಮದಾಗುತ್ತದೆ ಎಂದು ತಿಳಿಸಿದರು. ಸಿದ್ರಾಮಯ್ಯ ಸ್ವಾಮಿ ಅವರು ರುದ್ರಪಶುಪತಿ ಸ್ವಾಮೀಜಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು.

ರುದ್ರಯ್ಯ ಹಿರೇಮಠ, ನಿಂಗೌಡ ಪಾಟೀಲ, ಎ.ಎಸ್. ನಾಯಿಕ, ಶ್ಯಾಮು ತೆಲಸಂಗ, ಸಿ.ಎಚ್. ಪಾಟೀಲ, ಕಾಮಗೌಡ ಪಾಟೀಲ, ಜಗದೀಶ ಕೊರಬು, ಚನ್ನಪ್ಪ ಹಾಲಳ್ಳಿ, ಜಗದೀಶ ಕೊರಬು, ಅಪ್ಪಾಸಾಬ ಪಾಟೀಲ, ಶಂಕರ ಹಿಪ್ಪರಗಿ ಇತರರು ಉಪಸ್ಥಿತರಿದ್ದರು. ಕೆ.ಎಸ್. ಬಿರಾದಾರ ಸ್ವಾಗತಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net