ಸಂತ ಶಿಶುನಾಳ ಶರೀರ ಜಯಂತ್ಯುತ್ಸವ

Published on

ಹುಬ್ಬಳ್ಳಿ: ಶಿಶುನಾಳ ಶರೀಫ ಶಿವಯೋಗೇಶ್ವರ ಸೇವಾ ಸಮಿತಿ ವತಿಯಿಂದ ಬಿಡ್ನಾಳ ಕ್ರಾಸ್ ಶಕ್ತಿನಗರದ ಶ್ರೀ ಮೈತ್ರಿ ವ್ಯಸನ ಮುಕ್ತಿ ಕೇಂದ್ರದಲ್ಲಿ ಶಿಶುನಾಳ ಶರೀಫರ 205ನೇ ಜಯಂತ್ಯುತ್ಸವ ಆಚರಿಸಲಾಯಿತು.

ಉಪನ್ಯಾಸ ನೀಡಿದ ಪ್ರೊ. ಕೆ.ಎಸ್. ಕೌಜಲಗಿ, ಶರೀಫರು ಪ್ರಥಮ ಮಹ್ಮದಿಯ ಕವಿಯಾಗಿದ್ದಾರೆ. ಇಸ್ಲಾಂ ಧರ್ಮದಲ್ಲಿ ಹುಟ್ಟಿ ಬ್ರಾಹ್ಮಣ ಶ್ರೀ ಗುರು ಗೋವಿಂದ ಭಟ್ಟರನ್ನು ಗುರುವಾಗಿ ಸ್ವೀಕರಿಸಿದರು. ಶ್ರೀ ರಾಮಕೃಷ್ಣ ಪರಮಹಂಸ ಹಾಗೂ ಸ್ವಾಮಿ ವಿವೇಕಾನಂದರಂತೆ ಶರೀಫರ ಪ್ರತಿಯೊಂದು ಪದದಲ್ಲಿ ಆಧ್ಯಾತ್ಮಿಕ ಅರ್ಥ ಅಡಗಿದೆ. ಇವರು ಭಾವೈಕ್ಯತೆಯ ಹರಿಕಾರರು ಎಂದರು.

ಬಾಲಾಜಿ ಆಸ್ಪತ್ರೆಯ ಡಾ. ಕ್ರಾಂತಿಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶರೀಫರ ತತ್ವಪದಗಳು ಜನರ ಬದುಕನ್ನು ಹಸನಗೊಳಿಸುತ್ತವೆ. ಜಾತಿ, ಮತ, ಪಂಥ, ಭಾಷೆ ಮೀರಿ ಎಲ್ಲರೂ ಅವರ ತತ್ವಗಳನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲಿದೆ ಎಂದರು.

ಎಸ್ಎಸ್ ಶೆಟ್ಟರ್ ಫೌಂಡೇಷನ್ ಅಧ್ಯಕ್ಷ ಸಂಕಲ್ಪ ಶೆಟ್ಟರ್, ಶ್ರದ್ಧಾ ಫೌಂಡೇಷನ್ ಅಧ್ಯಕ್ಷೆ ಮೀನಾ ಏರಿಮಣಿ, ಡಾ. ಪ್ರೇಮಾ ಗಿರಿಮಶೆಟ್ಟಿ, ವೆಂಕಟೇಶ ಕಾಟವೆ, ಎಚ್.ಎಸ್. ಕಿರಣ, ಅಮಿತ ಮಹಾಜನ, ಸದಾಶಿವ ಚೌಶೆಟ್ಟಿ, ಶಶಿಕಾಂತ ಗುಡಿ, ರವಿ ಕೊಪ್ಪಳ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಸಮಾಜ ಸೇವಕ ರಮೇಶ ಮಹಾದೇವಪ್ಪನವರ, ಶರೀಫರ ತತ್ವಪದಗಳು ಇಂದಿಗೂ ಪ್ರಸ್ತುತ ಎಂದರು.

ಪ್ರಕಾಶ ಕಂಬಳಿ, ಶ್ರೀಕಾಂತ ಅಂಬೇಕರ ಅವರು ಶರೀರ ಹಾಡುಗಳನ್ನು ಪ್ರಸ್ತುತಪಡಿಸಿದರು.

ಶಿಶುನಾಳ ಶರೀಫ ಶಿವಯೋಗೀಶ್ವರ ಸೇವಾ ಸಮಿತಿ ಅಧ್ಯಕ್ಷ ಚನ್ನಬಸಪ್ಪ ಕೊಣ್ಣೂರ ಸ್ವಾಗತಿಸಿದರು. ಸಮಿತಿ ಕಾರ್ಯದರ್ಶಿ ಶಂಕರ ಮಿಸ್ಕಿನ್ ವಂದಿಸಿದರು. ಶಾರದಾ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.

ಕಲಂದರ ಮುಲ್ಲಾ, ರಾಚಣ್ಣ ಕುಬಸದ, ಕುಮಾರ ಪಾಟೀಲ, ರವಿ ಉಮದಿ, ವಿನಯ ಇಚ್ಚಂಗಿ, ನೀಲಾ ಕುಬಸದ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net