

ನಂದಗುಡಿ: ಸಹಕಾರ ಸಂಗಳು ಲಾಭದಲ್ಲಿ ನಡೆಯಬೇಕಾದರೆ, ಷೇರುದಾರರು ಪಡೆದ ಸಾಲವನ್ನು ಸಕಾಲಕ್ಕೆ ಮರು ಪಾವತಿ ಮಾಡಬೇಕು ಎಂದು ಒಕ್ಕಲಿಗರ ಸಂದ ನಿರ್ದೇಶಕ ಬಿ.ವಿ.ರಾಜಶೇಖರಗೌಡ ತಿಳಿಸಿದರು. ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ನೆಲವಾಗಿಲು ಸರ್ಕಾರಿ ಸಂಯುಕ್ತ ಪ್ರೌಢಶಾಲಾ ಆವರಣದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂದ 2024&25ನೇ ಸಾಲಿನ ಸಾಮಾನ್ಯ ಸರ್ವ ಸದಸ್ಯರ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದರು. ಸಂವು ಉತ್ತಮವಾಗಿ ನಡೆದುಕೊಂಡು ಬರುತ್ತಿದ್ದು, ರೈತರು ಸಾಲವನ್ನು ಸಮಯಕ್ಕೆ ಸರಿಯಾಗಿ ಸಾಲ ಪಾವತಿಸಿದ್ದರಿಂದ ಉತ್ತಮ ಲಾಭಾಂಶ ಬಂದಿದೆ ಎಂದರು.
ಸಂದ ಅಧ್ಯಕ್ಷ ಎಚ್.ಎಂ.ನಾರಾಯಣಗೌಡ ಮಾತನಾಡಿ, ಸಂದ ವ್ಯಾಪ್ತಿಗೆ 32 ಗ್ರಾಮಗಳು ಒಳಪಟ್ಟಿದ್ದು, 4 ಸಾವಿರ ಷೇರುದಾರರಿದ್ದು, ಇನ್ನೂ 1600 ಷೇರುದಾರರು ಸರಕಾರದ ಅದೇಶದ ಅನ್ವಯ 500 ರೂ. ಷೇರು ಮೊತ್ತವನ್ನು ಪಾವತಿಸಿ, ಷೇರನ್ನು ನೋಂದಾಯಿಸಿಕೊಳ್ಳಲು ಅವಕಾಶ ನೀಡಿದೆ ಎಂದು ಹೇಳಿದರು. ಮುಖ್ಯ ಕಾರ್ಯ ನಿರ್ವಾಹಕ ಎಸ್.ನಾಗೇಶ್ ಮಾತನಾಡಿ, 2024&25ನೇ ಸಾಲಿನಲ್ಲಿ ಸಂಕ್ಕೆ ವ್ಯಾಪಾರ ಲಾಭ 27.28 ಲಕ್ಷ ರೂ. ಗಳಿಸಿದ್ದು, 8.36 ಲಕ್ಷ ರೂ. ನಿವ್ವಳ ಲಾಭ ಬಂದಿದೆ. 705 ರೈತರಿಗೆ 5.96 ಕೋಟಿ ರೂ. ಸಾಲ ನೀಡಿದೆ. 205 ಸದಸ್ಯರಿಗೆ 1.75 ಕೋಟಿ ರೂ. ಚಿನ್ನಾಭರಣ ಸಾಲ ವಿತರಿಸಿದೆ. 152 ಸದಸ್ಯರಿಂದ 2.86 ಕೋಟಿ ರೂ. ಠೇವಣಿ ಸಂಗ್ರಹಿಸಿದೆ. ಪ್ರತಿ ವರ್ಷ ಸಂದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲು 50 ಸಾವಿರ ಮೀಸಲಿರಿಸಿದ್ದು, ಮುಂದಿನ ದಿನಗಳಲ್ಲಿ 4 ಸಾವಿರಕ್ಕೂ ಹೆಚ್ಚು ಸದಸ್ಯರಿರುವುದರಿಂದ ಮುಂದಿನ ದಿನಗಳಲ್ಲಿ ಪ್ರತಿಭಾ ಪುರಸ್ಕಾರಕ್ಕೆ ಹೆಚ್ಚಿನ ಹಣವನ್ನು ಮೀಸಲಿರಿಸಲಾಗುವುದು ಎಂದರು.
ಪದವಿ, ಪಿಯುಸಿ ಹಾಗೂ ಎಸ್ಎಸ್ಎಲ್ಸಿ ಪರೀೆಗಳಲ್ಲಿ ಹೆಚ್ಚು ಅಂಕ ಗಳಿಸಿದ ಷೇರುದಾರರ 45 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನಿರ್ದೇಶಕರಾದ ಎಚ್.ಎಂ.ಧಮೇರ್ಶ್, ಎಚ್.ಕೆ.ನಾರಾಯಣಗೌಡ, ಎಚ್.ಎನ್.ಬೈರೇಗೌಡ, ಎಸ್.ಪಿ.ಮುನೇಗೌಡ, ಎಂ.ನಾಗೇಶ್, ವಿ.ಪದ್ಮ, ಸಿ.ಎನ್. ದಿನೇಶ್, ಚಂದ್ರಪ್ಪ, ಸಿ.ಎಂ. ನಾರಾಯಣಸ್ವಾಮಿ, ಇಮ್ತಿಯಾಜ್ ಅಹಮದ್, ಎಂ.ಮುನಿರಾಜು, ಎಚ್.ಎಂ. ರಾಜಣ್ಣ, ಸಂದ ಲೆಕ್ಕಪಾಲಕರಾದ ಎನ್.ಅಶೋಕ ಇದ್ದರು.
ಹೆಸರು ಬದಲಿಸಲು ಕ್ರಮ : ಹಿರಿಯ ನಿರ್ದೇಶಕ ಎನ್.ಡಿ.ರಮೇಶ್ ಮಾತನಾಡಿ, ಸಂದ ಹೆಸರು ಹಾಲಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂ ನಿಯಮಿತ ನೆಲವಾಗಿಲು ಎಂದಿದ್ದು, ಹೊಸ ಬೈಲಾ ಪ್ರಕಾರ ನೆಲವಾಗಿಲು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂ ಎಂದು ಬದಲಾವಣೆಯಾಗಿದೆ. ನಂದಗುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಬನಹಳ್ಳಿ ಷೇರುದಾರರು ಇಟ್ಟಸಂದ್ರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂದಲ್ಲಿದ್ದು, ಗ್ರಾಮಸ್ಥರು ನೆಲವಾಗಿಲು ಸಂಕ್ಕೆ ಷೇರುದಾರರನ್ನು ಬದಲಾಯಿಸಿಕೊಳ್ಳಲು ಮನವಿ ನೀಡಿದ್ದಾರೆ, ಈ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ವಹಿಸಲಾಗುವುದು ಎಂದರು.