

ಕಡಬ: ಆಲಂಕಾರು ಗ್ರಾಮದ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜೀರ್ಣೋದ್ಧಾರದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮ, ಸಾಮೂಹಿಕ ಕುಂಕುಮಾರ್ಚನಾ ಕಾರ್ಯಕ್ರಮ, ಷಡಾಧಾರ ಪ್ರತಿಷ್ಠಾಪನೆ ಮತ್ತು ಶತ ಚಂಡಿಕಾಯಾಗ ಕಾರ್ಯಕ್ರಮ ಸೆ.1ರಿಂದ ಶುರುವಾಗಿದ್ದು, 6ರ ತನಕ ನಡೆಯಲಿದೆ. 3ರಂದು ಕುಡುಪು ನರಸಿಂಹ ನೇತೃತ್ವದಲ್ಲಿ ಬೆಳಗ್ಗೆ ಸಪ್ತಸತೀ ಪಾರಾಯಣ, ಕಲಶಪೂಜೆ. ಸಾಮೂಹಿಕ ಕುಂಕುಮಾರ್ಚನೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಅನೇಕ ಮಹಿಳೆಯರು ಪಾಲ್ಗೊಂಡಿದ್ದರು. ಸಂಜೆ ನವಾಕ್ಷರೀ ಮಂತ್ರಜಪ, ರಾತ್ರಿ ಪೂಜೆ, ಅಷ್ಟವಧಾನ ಸೇವೆ, ಕನ್ನಿಕಾ ಅರಾಧನೆ. ಸೆ.4ರಂದು ಬೆಳಗ್ಗೆ ಸಪ್ತಸತಿ ಪಾರಾಯಣ, ಕಲಶಪೂಜೆ, ನವಗ್ರಹ ಶಾಂತಿ ಹೋಮ, ರಾತ್ರಿ ಪೂಜೆ ಅಷ್ಟಾವಧಾನ ಸೇವೆ, ಕನ್ನಿಕಾ ಅರಾಧನೆ ನಡೆಯಿತು. ಸೆ.5ರಂದು ಬೆಳಗ್ಗೆ ಸಪ್ತಸತಿ ಪಾರಾಯಣ ಕಲಶಪೂಜೆ, ಸಂಜೆ ನವಾಕ್ಷರಿ ಮಂತ್ರ ಜಪ, ರಾತ್ರಿ ಪೂಜೆ, ಅಷ್ಟಾವಧಾನ ಸೇವೆ, ಕನ್ನಿಕಾ ಪೂಜೆ, ಕುಂಡ ಸಂಸ್ಕಾರ, ಅಗ್ನಿಪ್ರತಿಷ್ಠಾಪನೆ, ಅಗ್ನಿ ಜನನ ನಡೆಯಿತು.