ಮಾರುತಿ ಗುರೂಜಿ ನೇತೃತ್ವದಲ್ಲಿ ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ ವಿರುದ್ಧ ಹೋರಾಟ

Sharavati pumped storage
Published on

ಕಾರವಾರ: ಶರಾವತಿ ಪಂಪ್ಡ್‌ ಸ್ಟೋರೇಜ್ ಜಲ ವಿದ್ಯುತ್ ಯೋಜನೆಯನ್ನು ವಿರೋಧಿಸಿ ವಿವಿಧ ಮಠಾದೀಶರು, ತಜ್ಞರ ಮತ್ತು ಹೋರಾಟ ಪ್ರಮುಖರ ಸಮಾವೇಶ ಆಯೋಜಿಸುವದಾಗಿ ಬಂಗಾರಮಕ್ಕಿ ಕ್ಷೇತ್ರದ ಮಾರುತಿ ಗುರೂಜಿ ತಿಳಿಸಿದರು. ಶರಾವತಿ ಪಂಪ್ಡ್‌ ಸ್ಟೋರೇಜ್ ಜಲ ವಿದ್ಯುತ್ ಯೋಜನೆಯನ್ನು ವಿರೋಧಿಸುತ್ತಿರುವ ಅಖಿಲೇಶ ಚಿಪಳಿ, ಶರಾವತಿ ನದಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಕಾಂತ ಕೊಚರೇಕರ, ಪರಿಸರ ತಜ್ಞ ಶಂಕರ ರ‍್ಮ, ಸಾರಾ ಧನು, ಮಂಜಪ್ಪ ಸಾಗರ,ಬೊಮ್ಮಾರ ಗಣೇಶ, ಕುಮಾರ, ಮಂಜು ಮುಂತಾದವರು ಬಂಗಾರಮಕ್ಕಿಯಲ್ಲಿ ಮಾರುತಿ ಗುರೂಜಿ ಅವರ ಜತೆ ಚರ್ಚಿಸಿ, ಯೋನೆಯ ವಿರುದ್ಧ ಪ್ರಭಲ ಹೋರಾಟ ರೂಪಿಸುವ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಉದ್ದೇಶಿತ ಯೋಜನೆಯ ಅನುಷ್ಠಾನದಿಂದ ಶರಾವತಿ ನದಿ ಕಣಿವೆ ಪ್ರದೇಶದ ಸೂಕ್ಷ್ಮ ಪರಿಸರದಮೇಲೆ, ಅರಣ್ಯ, ಜೀವವೈದ್ಯತೆ, ಕ್ರಷಿ, ತೋಟಗಾರಿಕೆ ಮತ್ತು ಜನರ ಜೀವನೋಪಾಯದ ಮೇಲೆ ಆತಂಕವಿದೆ. ಶರಾವತಿ ಕಣಿವೆಯಲ್ಲಿ ಭೂಕುಸಿತದ ಅಪಾಯದ ಎಚ್ಚರಿಕೆ ನೀಡಿರುವ ಅಧ್ಯಯನ ಸಮಿತಿಯ ವರದಿಯನ್ನು ರಾಜ್ಯ ಸರ್ಕಾರ ನಿರ್ಲಕ್ಷ್ಯ  ಮಾಡಿರುವುದು ತೀವ್ರ ಕಳವಳಕಾರಿಯಾಗಿದೆ. ಶಿವಮೊಗ್ಗ ಮತ್ತು ಹೊನ್ನಾವರದಲ್ಲಿ ಯೋಜನೆಯ ವಿರುದ್ಧ ಈಗಾಗಲೇ ಒಂದು ಹಂತದ ಹೋರಾಟ ಆರಂಭಿಸಿ ರಾಜ್ಯದ  ಗಮನಸೆಳೆಯಲಾಗಿದೆ. ಹೋರಾಟಕ್ಕೆ ವಿವಿಧ ಪ್ರಮುಖರು,ಸಂಘಟನೆಗಳು ಪಕ್ಷಾತೀತ ಬೆಂಬಲಿಸಿದ್ದಾರೆ. ಕೆಲವು ಗ್ರಾಮ ಸಭೆಗಳು ಯೋಜನೆಯ ವಿರುದ್ಧ ನಿರ್ಣಯ ಸ್ವೀಕರಿಸಿವೆ. ಇದು ಉತ್ತಮ ಬೆಳವಣಿಗೆ. ಆದರೆ, ಅಷ್ಟು ಸಾಲದು. ಜನಜನಪ್ರತಿನಿಗಳು ಹೋರಾಟ ಪ್ರಮುಖರ ಜೊತೆ ಮುಖ್ಯಮಂತ್ರಿಗಳಲ್ಲಿ ನಿಯೋಗ ಹೋಗಿ ಯೋಜನೆಯನ್ನು ಕೈಬಿಡುವಂತೆ ಪ್ರಭಲ ಒತ್ತಾಯ ತರಬೇಕು ಎಂದು ಸಭೆ ಯಲ್ಲಿ ಹೋರಾಟಗಾರರು ಅಭಿಪ್ರಾಯ ವ್ಯಕ್ತಪಡಿಸಿದರು. ಪರಿಸರ,ಜೀವ ವೈವಿಧ್ಯಗಳ ಸುರಕ್ಷತೆ ಮತ್ತು ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಶರಾವತಿ ಪಂಪ್ಡ ಸ್ಟೋರೇಜ್ ವಿದ್ಯುತ್ ಯೋಜನೆಯನ್ನು ಕೈಬಿಡಬೇಕು. ಶರಾವತಿ ನದಿಪಾತ್ರವೂ ಸೇರಿದಂತೆ ಯೋಜನೆಯ ವಿರುದ್ಧ ತಾಲೂಕಿನಾದ್ಯಂತ ಜನಜಾಗ್ರತಿ ಮೂಡಿಸುವ ಅಭಿಯಾನ ನಡೆಸುವದಾಗಿ ಮತ್ತು ತಮ್ಮ ಕುಟುಂಬದ ಜಮೀನನ್ನು ಯಾವುದೇ ಕಾರಣಕ್ಕೂ ಯೋಜನೆಗೆ ನೀಡದೇ ಹೋರಾಟಕ್ಕೆ ಬಲ ತುಂಬುವದಾಗಿ ಮಾರುತಿ ಗುರೂಜಿ ಘೋಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net