ಎಚ್ಚರ ತಪ್ಪಿದರೆ ಶರಾವತಿ ಮೇಲೆ ಬೀಳಲಿದೆ ಕೆಂಗಣ್ಣು

29sgr3
ಸಾಗರ ವಕೀಲರ ಸಂಘದ ಪದಾಧಿಕಾರಿಗಳು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ರವೀಶ್ ಕುಮಾರ್, ಈ.ನಾಗರಾಜ್, ಎಚ್.ಬಿ.ರಮೇಶ್ ಇತರರಿದ್ದರು.
Published on

ಸಾಗರ: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ಶುಕ್ರವಾರ ವಕೀಲರ ಸಂಘದ ಪದಾಧಿಕಾರಿಗಳು ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ನ್ಯಾಯವಾದಿ ರವೀಶ್‌ಕುಮಾರ್ ಮಾತನಾಡಿ, ಕಾವೇರಿ ಜಿಲ್ಲೆಗಳಿಗೆ ಮಾತ್ರ ಹೋರಾಟ ಸೀಮಿತ ಎಂದು ನಾವು ಮೈಮರೆಯುವಂತಿಲ್ಲ. ಬೆಂಗಳೂರಿಗೆ ಕಾವೇರಿ ಹರಿಯದೆ ಹೋದರೆ ರಾಜ್ಯದ ದೃಷ್ಟಿ ನಮ್ಮ ಜಿಲ್ಲೆಯ ಶರಾವತಿಯ ಮೇಲೆ ಬೀಳುವ ಅಪಾಯ ಇಲ್ಲದಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಶರಾವತಿ ನದಿ ನೀರು ಬೇರೆ ಕಡೆ ಹೋಗದಂತೆ ಎಚ್ಚರಿಕೆ ವಹಿಸಲು ಇಂತಹ ಹೋರಾಟದಲ್ಲಿ ಪಾಲ್ಗೊಳ್ಳುವುದು ಅಗತ್ಯ ಎಂದರು.
ವಕೀಲರ ಸಂಘದ ಅಧ್ಯಕ್ಷ ಈ.ನಾಗರಾಜ್, ಕಾರ್ಯದರ್ಶಿ ಎಚ್.ಬಿ.ರಮೇಶ್, ಖಜಾಂಚಿ ಎಸ್.ಕಿರಣಕುಮಾರ್, ಪ್ರಮುಖರಾದ ಕೆ.ವಿ.ಪ್ರವೀಣ ಕುಮಾರ್, ಅಬ್ದುಲ್ ರಶೀದ್, ಜ್ಯೋತಿ ಕೋವಿ, ಪರಿಮಳ, ಕೆ.ಎನ್.ಶ್ರೀಧರ್, ಎಚ್.ಆರ್.ಶ್ರೀಧರ್, ಎಂ.ರಾಘವೇಂದ್ರ, ಸುದರ್ಶನ್, ಎಚ್.ಬಿ.ರಾಘವೇಂದ್ರ, ಪ್ರೇಮ್ ಸಿಂಗ್, ವಿನಯಕುಮಾರ್ ಇತರರಿದ್ದರು.
ಶಿವಪ್ಪ ನಾಯಕ ನಗರದ ನಾಗರೀಕ ವೇದಿಕೆ ಸದಸ್ಯರು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಹಿಂದಿನಿಂದಲೂ ತಮಿಳುನಾಡು, ಕರ್ನಾಟಕದ ನಡುವೆ ಕಾವೇರಿ ನದಿ ನೀರು ಹಂಚಿಕೆ ಸಂಬಂಧ ವಿವಾದ ನಡೆಯುತ್ತಿದೆ. ರಾಜ್ಯ ಸರ್ಕಾರ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸದೆ ಇರುವುದರಿಂದ ರಾಜ್ಯದ ರೈತರಿಗೆ ಹೆಚ್ಚು ಅನ್ಯಾಯವಾಗುತ್ತಿದೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ವೇದಿಕೆ ಅಧ್ಯಕ್ಷ ಎಂ.ರಾಜಶೇಖರ್, ಕಾರ್ಯಾಧ್ಯಕ್ಷ ಸತ್ಯನಾರಾಯಣ, ಉಪಾಧ್ಯಕ್ಷ ಎಚ್.ಗೋಪಾಲ, ಪ್ರಧಾನ ಕಾರ್ಯದರ್ಶಿ ರಿಚರ್ಡ್ ಡಿಸೋಜ, ಪ್ರಮುಖರಾದ ಸುರೇಶ್, ವಿನಾಯಕ, ಬಂಗಾರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net