

ಸಿದ್ದಾಪುರ: ಉ.ಕ. ಜಿಲ್ಲೆಯ ಶರಾವತಿ ನದಿ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಪ್ರತಿಭಟಿಸುತ್ತ ಅದರ ಉಳಿವಿನ ಬಗ್ಗೆ ಜಾಗೃತಿ ಮೂಡಿಸಲು ಗಣೇಶ ಯಾಜಿ ಮತ್ತು ತಂಡ, ಮೈಸೂರು ಸಿನಿಮಾ ಸೊಸೈಟಿ ಸಹಯೋಗದಲ್ಲಿ ನಿರ್ವಿುಸಿದ 29 ನಿಮಿಷಗಳ ಶರಾವತಿ ಸಾಂಗತ್ಯ ಕಿರುಚಿತ್ರ ಐಜಿಎನ್ಸಿಎ 6ನೇ ನದಿ ಉತ್ಸವಕ್ಕೆ ಆಯ್ಕೆಯಾಗಿ ಸೆ. 27ರಂದು ಮೊದಲ ಪ್ರದರ್ಶನ ಕಂಡಿದೆ.
ಈ ಕಿರುಚಿತ್ರ ಕಾವ್ಯಾತ್ಮಕವಾಗಿ ಬಗೆಬಗೆಯ ರೂಪಕಗಳಿಂದೊಳಗೊಂಡು ವಿಭಿನ್ನ ನಿರೂಪಣಾ ಶೈಲಿಯಿಂದ ಕೂಡಿದೆ.
ಕೆಲ ದಿನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಿರುಚಿತ್ರ ಬಿಡುಗಡೆಗೊಂಡು ಸಮಾಜಕ್ಕೆ ಶರಾವತಿ ನದಿಯ ಮಹತ್ವ ಸಾರಲಿದೆ.