ನಾಳೆ ಸಾಗರ ತಾಲೂಕು 8ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ

08kgl01
Published on

ಕಾರ್ಗಲ್: ಕರ್ನಾಟಕ ಜಾನಪದ ಪರಿಷತ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸಾಗರದ ಸೇವಾಸಾಗರ ಶಾಲೆಯ ಅಜಿತ ಸಭಾಭವನದಲ್ಲಿ ಜ.9ರಂದು ಮಧ್ಯಾಹ್ನ 3ಕ್ಕೆ ತಾಲೂಕು ಮಟ್ಟದ ಮಕ್ಕಳ 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿವೆ. ಸರ್ವಾಧ್ಯಕ್ಷೆಯಾಗಿ ಶರಾವತಿ ಕಣಿವೆಯ ನಿಶ್ಚಿತಾ ಎಂ.ಶೆಟ್ಟಿ ಆಯ್ಕೆಯಾಗಿದ್ದಾಳೆ.

ತಾಲೂಕು ಮಟ್ಟದ ಸಮ್ಮೇಳನದ ತಂಡ ಹಾಗೂ ಪಪಂ ಅಧ್ಯಕ್ಷೆ ವಾಸಂತಿ ರಮೇಶ್, ಉಪಾಧ್ಯಕ್ಷ ಪಿ.ಮಂಜುನಾಥ್, ಸದಸ್ಯೆ ಲಲಿತಾ ಮಂಜುನಾಥ್ ಅವರು ಗುರುವಾರ ಸಮ್ಮೇಳನದ ಸರ್ವಾಧ್ಯಕ್ಷೆಯನ್ನು ಅಭಿನಂದಿಸಿ, ಸಮ್ಮೇಳನಕ್ಕೆ ಆಹ್ವಾನಿಸಿದರು.

ಪಪಂ ಅಧ್ಯಕ್ಷೆ ವಾಸಂತಿ ರಮೇಶ್ ಮಾತನಾಡಿ, ಈ ಬಾರಿ ತಾಲೂಕು ಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ನಿಶ್ಚಿತಾ ಎಂ.ಶೆಟ್ಟಿ ಆಯ್ಕೆಯಾಗಿರುವುದು ಶರಾವತಿ ಕಣಿವೆಯ ಹಿರಿಮೆಗೆ ಮತ್ತೊಂದು ಗರಿ. ಕಣಿವೆ ಪ್ರದೇಶ ಮಕ್ಕಳ ಪ್ರತಿಭೆಗಳಿಗೆ ನಿರಂತರವಾಗಿ ಪ್ರೋತ್ಸಾಹ ನೀಡುತ್ತಿದ್ದು ಅದಕ್ಕೆ ಪೂರಕವಾಗಿ ಅವರಲ್ಲಿನ ಪ್ರತಿಭೆ ಹೊರತರಲು ಸಮ್ಮೇಳನಗಳು ಉತ್ತಮ ವೇದಿಕೆ ಎಂದರು.

ಮುಖ್ಯಾಧಿಕಾರಿ ಜಗದೀಶ್ ನಾಯ್ಕ, ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ, ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಪರಮೇಶ್ವರ ಕರೂರು, ಕಾರ್ಯದರ್ಶಿ ಸತ್ಯನಾರಾಯಣ ಶಿರವಂತೆ, ರಾಧಾಕೃಷ್ಣ ಶಾಲೆ ಪ್ರಾಚಾರ್ಯ ಗೋಪಾಲ್, ಪಾಲಕರಾದ ಮುರುಗನ್, ಚೈತ್ರಾಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net